ಮಧ್ಯ ಪ್ರದೇಶ: ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಬೀದಿ ನಾಯಿಗಳು, ವಿಡಿಯೋ ವೈರಲ್

ರಾಜಗಢ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಹಸುವೊಂದು ಅಡ್ಡಾಡುತ್ತಾ ವೈದ್ಯಕೀಯ ತ್ಯಾಜ್ಯವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆದ ಕೆಲ ದಿನಗಳ ನಂತರ, ಜಬಲ್‌ಪುರದ ಆರೋಗ್ಯ ಕೇಂದ್ರದ ರೋಗಿಗಳ ಹಾಸಿಗೆಯ ಮೇಲೆ ಬೀದಿ ನಾಯಿಗಳು ಮಲಗಿರುವ ಹೊಸ ವಿಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ.
ಎರಡು ನಾಯಿಗಳು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವುದು
ಎರಡು ನಾಯಿಗಳು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವುದು

ಭೋಪಾಲ್: ರಾಜಗಢ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಹಸುವೊಂದು ಅಡ್ಡಾಡುತ್ತಾ ವೈದ್ಯಕೀಯ ತ್ಯಾಜ್ಯವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆದ ಕೆಲ ದಿನಗಳ ನಂತರ, ಜಬಲ್‌ಪುರದ ಆರೋಗ್ಯ ಕೇಂದ್ರದ ರೋಗಿಗಳ ಹಾಸಿಗೆಯ ಮೇಲೆ ಬೀದಿ ನಾಯಿಗಳು ಮಲಗಿರುವ ಹೊಸ ವಿಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ.

ಶಹಪುರ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ದಲ್ಲಿ ರೋಗಿಗಳಿಗೆ ಮೀಸಲಾದ ಹಾಸಿಗೆಗಳ ಮೇಲೆ ಎರಡು ಬೀದಿ ನಾಯಿಗಳು ಮಲಗಿರುವುದನ್ನು ನೋಡಬಹುದಾದರೆ, ಅದೇ ಸರ್ಕಾರಿ ಆರೋಗ್ಯ ಸೌಲಭ್ಯದ ಮತ್ತೊಂದು ವೈರಲ್ ವಿಡಿಯೋದಲ್ಲಿ ಆಪರೇಷನ್ ಥಿಯೇಟರ್ ಬಳಿ ಸ್ವಚ್ಛತೆ ಮತ್ತು ನೈರ್ಮಲ್ಯದ ದಯನೀಯ ಸ್ಥಿತಿಯನ್ನು ತೋರಿಸುತ್ತದೆ.

ಗರ್ಭಿಣಿ ಪತ್ನಿಯ ವೈದ್ಯಕೀಯ ತಪಾಸಣೆಗಾಗಿ ಅದೇ ಸಿಎಚ್‌ಸಿಗೆ ಹೋಗಿದ್ದ ಶಹಪುರ (ಜಬಲ್‌ಪುರ) ನಿವಾಸಿ ಸಿದ್ಧಾರ್ಥ್ ಜೈನ್ ಎಂಬಾತ ಅವಳಿ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ.

ಈ ಆಘಾತಕಾರಿ ದೃಶ್ಯಗಳ ಹೊರತಾಗಿ, ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವುದು ಕೇವಲ ಒಬ್ಬ ನರ್ಸ್ ಮಾತ್ರ ಮತ್ತು ಯಾವುದೇ ವೈದ್ಯರು ಅಥವಾ ಇತರ ಅರೆವೈದ್ಯಕೀಯ ಅಥವಾ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿರಲಿಲ್ಲ. ಈಮಧ್ಯೆ, ವಿಡಿಯೋಗಳು ವೈರಲ್ ಆದ ನಂತರ ಜಬಲ್ಪುರ ಜಿಲ್ಲಾಡಳಿತವು ಈ ವಿಚಾರದ ಮೇಲೆ ಗಮನ ಹರಿಸಿದೆ.

ಬ್ಲಾಕ್ ಮೆಡಿಕಲ್ ಆಫೀಸರ್ (ಬಿಎಂಒ) ಡಾ. ಸಿಕೆ ಅಟ್ರೌಲಿಯಾ ನೋಟಿಸ್ ನೀಡಿದ್ದು, 24 ಗಂಟೆಗಳ ಒಳಗೆ ಉತ್ತರಿಸಲು ಕೇಳಲಾಗಿದೆ. ಅವರ ಉತ್ತರದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಜಬಲ್ಪುರ್ ಜಿಲ್ಲೆಯಲ್ಲಿ ನಾವು ಏಳು ಸಿಎಚ್‌ಸಿಗಳನ್ನು ಹೊಂದಿದ್ದೇವೆ. ಆದರೆ ಅವುಗಳಲ್ಲಿ ಒಂದರಿಂದ ಈ ಘಟನೆ ವರದಿಯಾಗಿದೆ. ಅಂದರೆ ಮೇಲ್ವಿಚಾರಣಾ ಪ್ರಾಧಿಕಾರವು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುತ್ತಿಲ್ಲ; ಇಲ್ಲದಿದ್ದರೆ ಇಂತಹ ಪುನರಾವರ್ತಿತ ಅವ್ಯವಸ್ಥೆ ಅಲ್ಲಿಂದ ವರದಿಯಾಗುತ್ತಿರಲಿಲ್ಲ ಎಂದಿದ್ದಾರೆ.

ಅಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ. ಆದರೆ, ಇನ್ನೂ ಇಂತಹ ಅವ್ಯವಸ್ಥೆ ಚಾಲ್ತಿಯಲ್ಲಿದ್ದರೆ ಆಗ ಬಿಎಂಒ ಉತ್ತರ ನೀಡಬೇಕಾಗುತ್ತದೆ. ಉತ್ತರ ಅತೃಪ್ತಿಕರವಾಗಿದ್ದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಬಲ್‌ಪುರ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಸಂಜಯ್ ಮಿಶ್ರಾ ಸೋಮವಾರ ಹೇಳಿದ್ದಾರೆ.

ಇದಕ್ಕೂ ಮೊದಲು, ಸೆಪ್ಟೆಂಬರ್‌ನಲ್ಲಿ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ನಾಯಿಯೊಂದು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ವಿಡಿಯೋ ವೈರಲ್ ಆಗಿತ್ತು. ಇದು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ನಿಂದ ಟೀಕೆಗೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com