ಸುಪ್ರೀಂ ಆದೇಶ ನೀಡಿ 3 ವರ್ಷ ಕಳೆದರೂ ಅಯೋಧ್ಯೆಯಲ್ಲಿ ಇನ್ನು ಆರಂಭಗೊಳ್ಳದ ಹೊಸ ಮಸೀದಿ ನಿರ್ಮಾಣ ಕಾರ್ಯ!

ಮುಳ್ಳುತಂತಿಯ ಬೇಲಿ ಮತ್ತು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಹಾಕಿರುವ ಬೋರ್ಡ್ ಅಯೋಧ್ಯೆಯ ಸಮೀಪವಿರುವ ಧನ್ನಿಪುರ ಗ್ರಾಮದ ಈ ಸ್ಥಳದಲ್ಲಿ ದೊಡ್ಡ ಮಸೀದಿ ಸಂಕೀರ್ಣವು ನಿರ್ಮಾಣವಾಗಲಿದೆ ಎಂಬುದಕ್ಕೆ ಏಕೈಕ ಸೂಚಕವಾಗಿದೆ.
ಅಯೋಧ್ಯೆ ಮಸೀದಿಯ ನೀಲಿನಕ್ಷೆ
ಅಯೋಧ್ಯೆ ಮಸೀದಿಯ ನೀಲಿನಕ್ಷೆ

ಅಯೋಧ್ಯಾ: ಮುಳ್ಳುತಂತಿಯ ಬೇಲಿ ಮತ್ತು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಹಾಕಿರುವ ಬೋರ್ಡ್ ಅಯೋಧ್ಯೆಯ ಸಮೀಪವಿರುವ ಧನ್ನಿಪುರ ಗ್ರಾಮದ ಈ ಸ್ಥಳದಲ್ಲಿ ದೊಡ್ಡ ಮಸೀದಿ ಸಂಕೀರ್ಣವು ನಿರ್ಮಾಣವಾಗಲಿದೆ ಎಂಬುದಕ್ಕೆ ಏಕೈಕ ಸೂಚಕವಾಗಿದೆ.

ಐದು ಎಕರೆ ಜಾಗವನ್ನು ಹಂಚಿಕೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಸುಪ್ರೀಂ ಕೋರ್ಟ್ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದವನ್ನು ಇತ್ಯರ್ಥಗೊಳಿಸಿ ಮೂರು ವರ್ಷಗಳು ಕಳೆದರೂ ಉದ್ದೇಶಿತ ಮಸೀದಿ ಸ್ಥಳದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಚಟುವಟಿಕೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಟ್ರಸ್ಟ್‌ನ ಪ್ರಸ್ತಾವನೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಇನ್ನೂ ಅನುಮೋದಿಸಿಲ್ಲ. ಆದರೆ ಇದಕ್ಕೆ ಶೀಘ್ರದಲ್ಲೇ ಅನುಮೋದನೆ ಸಿಗುತ್ತದೆ ಎಂದು ಟ್ರಸ್ಟ್ ನಿರೀಕ್ಷಿಸುತ್ತಿದೆ.

'ನಾವು ಉದ್ದೇಶಿತ ಸಂಕೀರ್ಣದ ವಿವರವಾದ ನಕ್ಷೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದೇವೆ. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ತೆರವು ಈ ಹಿಂದೆ ವಿಳಂಬವಾಗಿತ್ತು. ನಕ್ಷೆಯ ಕ್ಲಿಯರೆನ್ಸ್‌ನಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಅಥರ್ ಹುಸೇನ್ ತಿಳಿಸಿದರು.

ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ನ ಟ್ರಸ್ಟ್ ಆಗಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಮಸೀದಿಯ ನಿರ್ಮಾಣ ಕಾರ್ಯ ಮಾಡುತ್ತಿದೆ. 

2019ರ ಸುಪ್ರೀಂ ಕೋರ್ಟ್‌ ತೀರ್ಪು ಬಾಬರಿ ಮಸೀದಿ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಇನ್ನು ಹೊಸ ಮಸೀದಿಗಾಗಿ ಮುಸ್ಲಿಂ ಸಮುದಾಯಕ್ಕೆ ಐದು ಎಕರೆ ಜಾಗವನ್ನು ಮಂಜೂರು ಮಾಡುವಂತೆಯೂ ಕೋರ್ಟ್ ಆದೇಶಿಸಿತ್ತು.

ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಗೊಂಡು ಮೂರು ದಶಕಗಳ ನಂತರ, ಅಯೋಧ್ಯೆ ನಗರದ ಜನರು ಎಲ್ಲಾ ಕಹಿಗಳನ್ನು ಮರೆತು, ಭಯ ಮತ್ತು ಅನುಮಾನಗಳ ಬದಲಿಗೆ, ಕಟ್ಟಡದ ಧ್ವಂಸದ 30ನೇ ವಾರ್ಷಿಕೋತ್ಸವದ ಡಿ 6ರನ್ನು ಸಾಮಾನ್ಯ ದಿನವಾಗಿ ತೆಗೆದುಕೊಳ್ಳುತ್ತಿದ್ದಾರೆ. ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅಯೋಧ್ಯೆ ಪೊಲೀಸ್ ಕಂಟೋನ್ಮೆಂಟ್ ಮತ್ತು ಶಸ್ತ್ರಸಜ್ಜಿತ ಕೋಟೆಯನ್ನು ನಿರ್ಮಿಸಿಲ್ಲ. ಆದರೆ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆಯಲ್ಲಿ ಬಾಬರಿ ಧ್ವಂಸ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭದ್ರತೆಯನ್ನು ಹೆಚ್ಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com