ಕೈ ತೆಕ್ಕೆಗೆ ಹಿಮಾಚಲ ಪ್ರದೇಶ: ಸಿಎಂ ಸ್ಥಾನ ಒಂದು, ಆಂಕಾಂಕ್ಷಿಗಳು ಹಲವರು, ಇಂದು ಕಾಂಗ್ರೆಸ್ ಮಹತ್ವದ ಸಭೆ!

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ, ಕಾಂಗ್ರೆಸ್ ತನ್ನ ಮುಂದಿನ ಸವಾಲನ್ನು ಎದುರಿಸಲು ಇಂದು ತನ್ನ ಶಾಸಕರ ಸಭೆಯನ್ನು ಕರೆದಿದೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಈ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ, ಕಾಂಗ್ರೆಸ್ ತನ್ನ ಮುಂದಿನ ಸವಾಲನ್ನು ಎದುರಿಸಲು ಇಂದು ತನ್ನ ಶಾಸಕರ ಸಭೆಯನ್ನು ಕರೆದಿದೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಈ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

ಚುನಾವಣೆ ಗೆದ್ದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಹೈಕಮಾಂಡ್ ಹಿಮಾಚಲ ಪ್ರದೇಶದತ್ತ ದೌಡಾಯಿಸಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆ ಕಸರತ್ತಿಗೆ ಇಂದು ಚಾಲನೆ ನೀಡುವ ಸಾಧ್ಯತೆ ಇದೆ. ಆದರೆ ಕಾಂಗ್ರೆಸ್ ಪಾಲಿಗೆ ಇದು ಅಷ್ಟು ಸುಲಭದ ಪ್ರಕ್ರಿಯೆ ಅಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಸಿಎಂ ಸ್ಥಾನಕ್ಕೆ 4ಕ್ಕೂ ಹೆಚ್ಚು ಪ್ರಬಲ ಆಕಾಂಕ್ಷಿಗಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನ ಹಿಮಾಚಲ ಪ್ರದೇಶ ಮುಖ್ಯಸ್ಥೆ ಪ್ರತಿಭಾ ಸಿಂಗ್ ಈ ಪಟ್ಟಿಯಲ್ಲಿ ಪ್ರಬಲ ಅಭ್ಯರ್ಥಿಯಾಗಿದ್ದು, ಕಳೆದ ವರ್ಷ ಕೊನೆಯುಸಿರೆಳೆದಿದ್ದ ಮಾಜಿ ಸಿಎಂ ವೀರಭದ್ರಸಿಂಗ್ ಅವರ ಪತ್ನಿ ಈ ಪ್ರತಿಭಾ ಸಿಂಗ್.  ಪ್ರತಿಭಾ ಸಿಂಗ್ ಮಂಡಿಯಿಂದ ಲೋಕಸಭಾ ಸಂಸದರಾಗಿದ್ದಾರೆ ಮತ್ತು ಮಾಜಿ ರಾಜಮನೆತನಕ್ಕೆ ಸೇರಿದವರಾಗಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಆದರೆ ಕಾಂಗ್ರೆಸ್ ಪ್ರಚಾರವನ್ನು ಸಮರ್ಥವಾಗಿ ಮುನ್ನಡೆಸಿದರು. ಹಿಮಾಚಲ ಪ್ರದೇಶದಲ್ಲಿ ಮೂರು ದಶಕಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದ ತನ್ನ ಪತಿ ವೀರಭದ್ರ ಸಿಂಗ್‌ಗೆ ನಿಷ್ಠರಾಗಿದ್ದ ಕಾಂಗ್ರೆಸ್ ಶಾಸಕರ ಬೆಂಬಲವನ್ನು ಅವರು ಪಡೆದಿದ್ದಾರೆ ಎನ್ನಲಾಗಿದೆ.

ಚುನಾವಣೆಗೆ ಸ್ಪರ್ಧಿಸಿ ಶಿಮ್ಲಾ ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿರುವ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಈ ವಿಚಾರವಾಗಿ ಮಾತನಾಡಿದ್ದು, "ಮಗನಾಗಿ, ಪ್ರತಿಭಾ ಜಿ ಅವರಿಗೆ ದೊಡ್ಡ ಜವಾಬ್ದಾರಿ ಸಿಗಬೇಕು ಎಂದು ನಾನು ಬಯಸುತ್ತೇನೆ. ಮಗನ ಜೊತೆಗೆ, ನಾನು ಪಕ್ಷದ ಜವಾಬ್ದಾರಿಯುತ ನಾಯಕನೂ ಆಗಿದ್ದೇನೆ. ನಾವು ಪಕ್ಷವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಗೌರವಿಸುತ್ತದೆ, ಜನರಿಗೆ ಏನು ಬೇಕೋ ಅದನ್ನು ಪಕ್ಷ ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದರು.

ಅಂತೆಯೇ "ನಾವು ವೀರಭದ್ರ ಸಿಂಗ್ ಜೀ ತೋರಿಸಿದ ಹಾದಿಯಲ್ಲಿ ನಡೆಯಬೇಕು. ಸರ್ಕಾರವು 'ವೀರಭದ್ರ ಸಿಂಗ್ ವಿಕಾಸ್ ಮಾದರಿ'ಯಲ್ಲಿ ಕೆಲಸ ಮಾಡುತ್ತದೆ. ಅವರು ಇಂದು ಸ್ವರ್ಗದಲ್ಲಿ ನಗುತ್ತಿರಬಹುದು ಎಂದು ಹೇಳುವ ಮೂಲಕ ತಂದೆ ಭಾವಾನತ್ಮಕತೆಯನ್ನು ಮುಂದಿಟ್ಟಿದ್ದಾರೆ. ಪ್ರತಿಭಾ ಸಿಂಗ್ ಮಾತ್ರವಲ್ಲದೇ ಮಾಜಿ ರಾಜ್ಯ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಮತ್ತು ಹರ್ಷವರ್ಧನ್ ಚೌಹಾಣ್ ಕೂಡ ಸಿಎಂ ರೇಸ್ ನಲ್ಲಿದ್ದಾರೆ. ಮುಖೇಶ್ ಅಗ್ನಿಹೋತ್ರಿ ಅವರು ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ಸ್ಥಾನವನ್ನು ಬಲವಾಗಿ ಎದುರಿಸಲು ಉನ್ನತ ಹುದ್ದೆಗೆ ಅರ್ಹರು ಎಂದು ನಂಬುತ್ತಾರೆ. ಇವರಲ್ಲದೇ  ರಾಜ್ಯ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಕುಲದೀಪ್ ಸಿಂಗ್ ರಾಥೋಡ್ ಅವರು ಕಳೆದ ಕೆಲವು ವರ್ಷಗಳಲ್ಲಿ ಆಳವಾಗಿ ವಿಭಜಿಸಲ್ಪಟ್ಟ ಪಕ್ಷವನ್ನು ಒಟ್ಟಿಗೆ ತಂದರು. ರಾಥೋಡ್ ಅವರನ್ನು ಕೆಲವು ತಿಂಗಳ ಹಿಂದೆ ಪ್ರತಿಭಾ ಸಿಂಗ್ ಅವರು ಮುಖ್ಯಸ್ಥರನ್ನಾಗಿ ಮಾಡಿದ್ದರು.

ಹಲವು ಕಾಂಗ್ರೆಸ್ ನಾಯಕರು ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬಹುದೆಂಬ ನಿರೀಕ್ಷೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎನ್ನಲಾಗಿದೆ. ಅವರು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವಾಗಲೂ ಇದನ್ನೇ ಬಳಸಿಕೊಂಡಿದ್ದರು. 

ಒಟ್ಟಾರೆ ಹಿಮಾಚಲ ಪ್ರದೇಶ ನಾಯಕನ ಆಯ್ಕೆ ವಿಚಾರವಾಗಿ ಇಂದು ಮಹತ್ವದ ಸಭೆ ನಡೆಯಲಿದ್ದು, ಶಿಮ್ಲಾದ ರಾಡಿಸನ್ ಹೋಟೆಲ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಶಿಮ್ಲಾದಲ್ಲಿ ನಡೆಯಲಿರುವ ಸಭೆಯಲ್ಲಿ ಹಿಮಾಚಲದ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಹಿರಿಯ ನಾಯಕ ಭೂಪಿಂದರ್ ಹೂಡಾ ಭಾಗವಹಿಸಲಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com