ಎಂಸಿಡಿ ಚುನಾವಣೆ: ಆಯ್ಕೆಯಾದವರ ಪೈಕಿ ಶೇ.66 ರಷ್ಟು ಮಂದಿ 41-70 ವಯಸ್ಸಿನವರು, ಶೇ.53 ರಷ್ಟು ಮಹಿಳೆಯರು

ಎಂಸಿಡಿಗೆ ಆಯ್ಕೆಯಾದ 250 ಕೌನ್ಸಿಲರ್ ಗಳ ಪೈಕಿ ಶೇ.51 ರಷ್ಟು ಮಂದಿ ತಮ್ಮ ವಿದ್ಯಾರ್ಹತೆಯನ್ನು ಘೋಷಿಸಿಕೊಂಡಿದ್ದು 5 ನೇ ತರಗತಿಯಿಂದ 12 ನೇ ತರಗತಿಯವರೆಗೂ ಓದಿರುವುದಾಗಿ ಹೇಳಿದ್ದಾರೆ.
ಎಂಸಿಡಿ ಗೆಲುವನ್ನು ಸಂಭ್ರಮಿಸುತ್ತಿರುವ ಕಾಂಗ್ರೆಸ್
ಎಂಸಿಡಿ ಗೆಲುವನ್ನು ಸಂಭ್ರಮಿಸುತ್ತಿರುವ ಕಾಂಗ್ರೆಸ್

ನವದೆಹಲಿ: ಎಂಸಿಡಿಗೆ ಆಯ್ಕೆಯಾದ 250 ಕೌನ್ಸಿಲರ್ ಗಳ ಪೈಕಿ ಶೇ.51 ರಷ್ಟು ಮಂದಿ ತಮ್ಮ ವಿದ್ಯಾರ್ಹತೆಯನ್ನು ಘೋಷಿಸಿಕೊಂಡಿದ್ದು 5 ನೇ ತರಗತಿಯಿಂದ 12 ನೇ ತರಗತಿಯವರೆಗೂ ಓದಿರುವುದಾಗಿ ಹೇಳಿದ್ದಾರೆ.
 
ಶೇ.66 ರಷ್ಟು ಮಂದಿ 41 - 70 ರ ವಯಸ್ಸಿನವರಾಗಿದ್ದಾರೆ ಎಂದು ಡೆಮಾಕ್ರೆಟಿಕ್ ರಿಫಾರ್ಮ್ಸ್ ವರದಿ ಹೇಳಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಹಾಗು ದೆಹಲಿ ಚುನಾವಣಾ ಕಾವಲು ಸಂಸ್ಥೆ 248 ವಿಜೇತ ಅಭ್ಯರ್ಥಿಗಳ ಸ್ವಘೋಷಿತ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿದೆ.

ಇನ್ನು ಇಬ್ಬರು ವಿಜೇತ ಅಭ್ಯರ್ಥಿಗಳ ವಿದ್ಯಾರ್ಹತೆಯನ್ನು ಸ್ಪಷ್ಟವಾದ ಪ್ರಮಾಣಪತ್ರ ಇಲ್ಲದ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಲು ಸಾಧ್ಯವಾಗಿಲ್ಲ. 248 ಅಭ್ಯರ್ಥಿಗಳ ಪೈಕಿ 132 ಅಭ್ಯರ್ಥಿಗಳು (ಶೇ.53 ರಷ್ಟು) ಅಭ್ಯರ್ಥಿಗಳು ಮಹಿಳೆಯರಾಗಿದ್ದು, ಆಮ್ ಆದ್ಮಿ ಪಕ್ಷದ ಸುಲ್ತಾನ್ ಪುರಿ-ಎ ವಾರ್ಡ್ ಕೌನ್ಸಿಲರ್ ಬಾಬಿ ತೃತೀಯ ಲಿಂಗಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com