ಗಡಿ ವಿವಾದ: ಕರ್ನಾಟಕದ ಸಿಎಂ ಹೇಳಿಕೆ ಅಮಿತ್ ಶಾ ಗೆ ಅಗೌರವ, ಚುನಾವಣಾ ದೃಷ್ಟಿಯಿಂದ ಹೇಳಿಕೆ; ಎಂವಿಎ

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಅಮಿತ್ ಶಾ ಗೆ ಅಗೌರವ ಉಂಟುಮಾಡಿದೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಹೇಳಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಅಮಿತ್ ಶಾ ಗೆ ಅಗೌರವ ಉಂಟುಮಾಡಿದೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಹೇಳಿದೆ.
 
ಮಹಾರಾಷ್ಟ್ರದ ಸಂಸದರ ನಿಯೋಗ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ ಎಂಬ ಬೊಮ್ಮಾಯಿ ಹೇಳಿಕೆಗೆ ಉದ್ಧವ್ ಠಾಕ್ರೆಯ ಶಿವಸೇನೆ ಬಣ ಪ್ರತಿಕ್ರಿಯೆ ನೀಡಿದೆ. 

ಕರ್ನಾಟಕದಲ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ರೀತಿಯ ಹೇಳಿಕೆ ನೀಡಲಾಗಿದೆ ಎಂದು ಶಿವಸೇನೆ ಉದ್ಧವ್ ಬಣದ ಮುಂಬೈ ದಕ್ಷಿಣ ಸಂಸದ ಅರವಿಂದ್ ಸಾವಂತ್ ಹೇಳಿದ್ದಾರೆ. 

ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದ್ದಾಗಲೇ ಕರ್ನಾಟಕ ಬೆಳಗಾಂ ನ ಹೆಸರನ್ನು ಬೆಳಗಾವಿ ಎಂದು ಮರುನಾಮಕರಣ ಮಾಡಿತ್ತು. ಅಷ್ಟೇ ಅಲ್ಲದೇ ವಿಧಾನಸೌಧವನ್ನೂ ನಿರ್ಮಿಸಿ ಕಲಾಪ ನಡೆಸಿದೆ ಇವೆಲ್ಲವೂ ಅಕ್ರಮ ಎಂದು ಸಾವಂತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com