ದೀಪಿಕಾ 'ಬೇಷರಂ' ಹಾಡಿಗೆ ಮಧ್ಯ ಪ್ರದೇಶ ಗೃಹ ಸಚಿವ ಕಿಡಿ, ಪಠಾಣ್ ಚಿತ್ರ ನಿಷೇಧಿಸುವ ಎಚ್ಚರಿಕೆ
ಭೋಪಾಲ್: ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪಠಾಣ್ ಚಿತ್ರದ 'ಬೇಷರಂ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರ ಬಟ್ಟೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಧ್ಯ ಪ್ರದೇಶದಲ್ಲಿ ಪಠಾಣ್ ಚಿತ್ರಕ್ಕೆ ನಿಷೇಧ ವಿಧಿಸುವ ಎಚ್ಚರಿಕೆಯನ್ನು ಮಿಶ್ರಾ ನೀಡಿದ್ದಾರೆ.
ಬಹುನಿರೀಕ್ಷಿತ ಪಠಾಣ್ ಚಿತ್ರದ ಮೊದಲ ಹಾಡನ್ನು ಚಿತ್ರತಂಡ ಸೋಮವಾರ ಬೆಳಗ್ಗೆ ಬಿಡುಗಡೆ ಮಾಡಿದ್ದು,
ಬೇಶರಂ ರಂಗ್ ಎಂಬ ಶೀರ್ಷಿಕೆಯ ಪೆಪ್ಪಿ ಡ್ಯಾನ್ಸ್‌ನಲ್ಲಿ ಚಿತ್ರದ ನಾಯಕ ಶಾರುಖ್ ಖಾನ್ ಮತ್ತು ನಾಯಕಿ ದೀಪಿಕಾ ಪಡುಕೋಣೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಟ್ಟೆ ಧರಿಸಿರುವ ಬಗ್ಗೆ ಕಿಡಿಕಾರಿದ ಮಧ್ಯ ಪ್ರದೇಶ ಗೃಹ ಸಚಿವರು, ಚಿತ್ರದಲ್ಲಿ ಕೆಲವು ಆಕ್ಷೇಪಾರ್ಹ ದೃಶ್ಯಗಳಿದ್ದು, ಅವುಗಳನ್ನು ಬದಲಾಯಿಸದಿದ್ದರೆ ಮಧ್ಯ ಪ್ರದೇಶದಲ್ಲಿ ಪಠಾಣ್ ಚಿತ್ರವನ್ನು ನಿಷೇಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಸಾಮಾಜಿಕ ಮಾಧ್ಯದಲ್ಲಿ ‘ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಬೇಷರಮ್ ರಂಗ್ (ನಾಚಿಕೆಯಿಲ್ಲದ ಬಣ್ಣ) ಎಂದಿರುವುದು ಸರಿಯಲ್ಲ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ