ಮೇಘಾಲಯದ ಆಡಳಿತಾರೂಢ ಎನ್ ಪಿಪಿಯ ಇಬ್ಬರು ಸೇರಿ ನಾಲ್ವರು ಶಾಸಕರು ಬಿಜೆಪಿಗೆ ಸೇರ್ಪಡೆ

ಮೇಘಾಲಯದ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ)ಯ ಇಬ್ಬರು ಶಾಸಕರು ಸೇರಿದಂತೆ ನಾಲ್ವರು ಶಾಸಕರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ವಿಧಾನಸಭೆ ಚುನಾವಣೆಗೂ ಮುನ್ನ ಕೇಸರಿ ಪಕ್ಷ ಈಶಾನ್ಯ ಪ್ರದೇಶದಲ್ಲಿ...
ನಾಲ್ವರು ಶಾಸಕರು ಬಿಜೆಪಿಗೆ ಸೇರ್ಪಡೆ
ನಾಲ್ವರು ಶಾಸಕರು ಬಿಜೆಪಿಗೆ ಸೇರ್ಪಡೆ

ನವದೆಹಲಿ: ಮೇಘಾಲಯದ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ)ಯ ಇಬ್ಬರು ಶಾಸಕರು ಸೇರಿದಂತೆ ನಾಲ್ವರು ಶಾಸಕರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ವಿಧಾನಸಭೆ ಚುನಾವಣೆಗೂ ಮುನ್ನ ಕೇಸರಿ ಪಕ್ಷ ಈಶಾನ್ಯ ಪ್ರದೇಶದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಯತ್ನಿಸುತ್ತಿದೆ.

ನಾಲ್ಕು "ಅನುಭವಿ ಮತ್ತು ಗೌರವಾನ್ವಿತ" ರಾಜಕೀಯ ವ್ಯಕ್ತಿಗಳ ಸೇರ್ಪಡೆಯಿಂದ ರಾಜ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ ಎಂದು ಈಶಾನ್ಯ ಪ್ರದೇಶದ ಬಿಜೆಪಿ ಪ್ರಮುಖ ನಾಯಕರಾದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.

2018ರ ಚುನಾವಣೆಯಲ್ಲಿ 60 ಸದಸ್ಯ ಬಲದ ಮೇಘಾಲಯದಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿದೆ. 

ರಾಜ್ಯದ ಆಡಳಿತಾರೂಢ ಎನ್‌ಪಿಪಿ ಬಿಜೆಪಿ ಎನ್ ಡಿಎ ಸದಸ್ಯನಾಗಿದ್ದರೂ, ಅದರಿಂದ ಅಂತರ ಕಾಯ್ದುಕೊಂಡಿದೆ.

ಎನ್ ಪಿಪಿ ಶಾಸಕರಾದ ಬೆನೆಡಿಕ್ಟ್ ಮಾರಾಕ್ ಮತ್ತು ಫೆರ್ಲಿನ್ ಸಂಗ್ಮಾ, ಪಕ್ಷೇತರ ಶಾಸಕ ಸ್ಯಾಮ್ಯುಯೆಲ್ ಎಂ ಸಂಗ್ಮಾ ಮತ್ತು ತೃಣಮೂಲ ಕಾಂಗ್ರೆಸ್‌ನ ಹಿಮಾಲಯ ಮುಕ್ತನ್ ಶಾಂಗ್‌ಪ್ಲಿಯಾಂಗ್ ಅವರು ಇಂದು ಬಿಜೆಪಿ ಪ್ರಧಾನ ಕಛೇರಿಯಲ್ಲಿ ಕೇಸರಿ ಪಕ್ಷ ಸೇರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com