ನಿತೀಶ್ ಕುಮಾ
ನಿತೀಶ್ ಕುಮಾ

ನೀನು ಕುಡುಕ: ಪ್ರತಿಭಟನೆಗಿಳಿದ ಬಿಜೆಪಿ ಶಾಸಕನ ವಿರುದ್ಧ ತಾಳ್ಮೆ ಕಳೆದುಕೊಂಡು ಕೂಗಾಡಿದ ಸಿಎಂ ನಿತೀಶ್ ಕುಮಾರ್!

ನಕಲಿ ಮದ್ಯ ಸೇವಿಸಿ ಬಿಹಾರದ ಸರನ್ ಜಿಲ್ಲೆಯ ಛಪ್ರಾ ಪ್ರದೇಶದಲ್ಲಿ ಐವರು ಮೃತಪಟ್ಟಿದ್ದು, ಈ ಘಟನೆ ಸಂಬಂಧ ಬುಧವಾರ ಬಿಹಾರ ವಿಧಾನಸಭೆಯಲ್ಲಿ ಗದ್ದಲವುಂಟಾಗಿತ್ತು.
Published on

ಸರನ್ (ಬಿಹಾರ): ನಕಲಿ ಮದ್ಯ ಸೇವಿಸಿ ಬಿಹಾರದ ಸರನ್ ಜಿಲ್ಲೆಯ ಛಪ್ರಾ ಪ್ರದೇಶದಲ್ಲಿ ಐವರು ಮೃತಪಟ್ಟಿದ್ದು, ಈ ಘಟನೆ ಸಂಬಂಧ ಬುಧವಾರ ಬಿಹಾರ ವಿಧಾನಸಭೆಯಲ್ಲಿ ಗದ್ದಲವುಂಟಾಗಿತ್ತು.

ಘಟನೆ ಸಂಬಂಧ ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಇದೇ ವೇಳೆ ಸದನದ ಬಾವಿಗಿಳಿದು ಪ್ರತಿಭಟನೆಯನ್ನೂ ನಡೆಸಿದರು.

ಸರ್ಕಾರ ಮದ್ಯಪಾನ ನಿಷೇಧವನ್ನು ಜಾರಿಗೆ ತಂದಾಗ ನಾವು ಅದನ್ನು ಬೆಂಬಲಿಸಿದೆವು. ಆದರೆ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಹೇಳಿದರು.

ಇದೇ ವೇಳೆ ವಿರೋಧ ಪಕ್ಷದ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು 2016ರ ಮದ್ಯ ನಿಷೇಧ ನೀತಿ ಕುರಿತು ಪ್ರಶ್ನೆ ಎತ್ತಿದರು.

ಈ ವೇಳೆ ತಾಳ್ಮೆ ಕಳೆದುಕೊಂಡ ನಿತೀಶ್ ಕುಮಾರ್ ಬಿಜೆಪಿ ಶಾಸಕರ ವಿರುದ್ಧ ಕೂಗಾಡಿದರು. ನೀನು ಕುಡಕ ಎಂದು ಕೂಗಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com