ಸಮಸ್ಯೆಗಳಿಗೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡಿದರಷ್ಟೇ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೆ ಉಳಿವು: ಜೈಶಂಕರ್ ತೀಕ್ಷ್ಣ ಮಾತು 

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. 
ಜೈಶಂಕರ್
ಜೈಶಂಕರ್

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
 
ಪಾಕಿಸ್ತಾನ ಅಲ್ ಖೈದಾ ನಾಯಕ ಒಸಾಮಾ ಬಿನ್ ಲ್ಯಾಡನ್ ಗೆ ಆತಿಥ್ಯ ನೀಡಿತ್ತು, ಈ ಮೂಲಕ ನೆರೆಯ ದೇಶದ ಸಂಸತ್ ಭವನದ ಮೇಲೆ ದಾಳಿ ಮಾಡಿತ್ತು, ಇಂತಹ ದೇಶಕ್ಕೆ ವಿಶ್ವಸಂಸ್ಥೆಯ ಅಂಗವಾಗಿರುವ ಯುಎನ್ ಎಸ್ ಸಿಯಲ್ಲಿ ಉಪದೇಶ ಮಾಡಲು ಅರ್ಹತೆ ಇಲ್ಲ ಎಂದು ಭಾರತ ಹೇಳಿದೆ. 

ಇನ್ನು ವಿಶ್ವಸಂಸ್ಥೆ ಬಗ್ಗೆಯೂ ಭಾರತ ತೀಕ್ಷ್ಣ ಮಾತುಗಳನ್ನಾಡಿದ್ದು, "ಸಾಂಕ್ರಾಮಿಕವಿರಲಿ, ಹವಾಮಾನ ಬದಲಾವಣೆ ಇರಲಿ, ಸಂಘರ್ಷ, ಭಯೋತ್ಪಾದನೆ ಯಾವುದೇ ಸಮಸ್ಯೆಗಳಿಗೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡಿದರಷ್ಟೇ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಉಳಿಯಲಿದೆ" ಎಂದು ಹೇಳಿದ್ದಾರೆ. 

 ತುರ್ತಾಗಿ ಸದಸ್ಯ ರಾಷ್ಟ್ರಗಳ ಒಕ್ಕೂಟದಲ್ಲಿ ಸುಧಾರಣೆ ತರಲು ನಾವು ನಿಸ್ಸಂಶಯವಾಗಿ ಕೇಂದ್ರೀಕೃತವಾಗಿದ್ದೇವೆ. ಸ್ವಾಭಾವಿಕವಾಗಿ ನಮಗೆ ನಮ್ಮ ದೃಷ್ಟಿಕೋನಗಳಿರುತ್ತವೆ. ಆದರೆ ಕನಿಷ್ಠ, ಈ ವಿಷಯ ಇನ್ನೂ ವಿಳಂಬವಾಗಲು ಬಿಡಬಾರದು ಎಂಬ ಒಮ್ಮುಖ ಅಭಿಪ್ರಾಯ ಬೆಳೆಯುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಅತ್ಯುತ್ತಮ ಪರಿಹಾರಗಳನ್ನು ಕಂಡುಕೊಳ್ಳುವಾಗ, ಬೆದರಿಕೆಗಳನ್ನು, ಭಯೋತ್ಪಾದನೆಯನ್ನು ಸಾಮಾನ್ಯಗೊಳಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ನಿಸ್ಸಂಶಯವಾಗಿ ಗಡಿಯಾಚೆಗಿನ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಗೆ ಅನ್ವಯಿಸುತ್ತದೆ. ಇದಷ್ಟೇ ಅಲ್ಲದೇ, ಒಸಾಮ ಬಿನ್ ಲ್ಯಾಡನ್ ಗೆ ಆತಿಥ್ಯ ನೀಡಿದ್ದ ದೇಶಕ್ಕೆ, ನೆರೆಯ ರಾಷ್ಟ್ರದ ಸಂಸತ್ ಭವನದ ಮೇಲೆ ದಾಳಿ ನಡೆಸಿದ ದೇಶಕ್ಕೆ ಇಂತಹ ವಿಶ್ವಸಂಸ್ಥೆ ಅಂಗವಾಗಿರುವ ಯುಎನ್ಎಸ್ ಸಿಯಲ್ಲಿ ಉಪದೇಶ ನೀಡಲು ಅರ್ಹತೆ ಇಲ್ಲ ಎಂದು ವಿಶ್ವಸಂಸ್ಥೆ ಹಾಗೂ ಪಾಕ್ ಗೆ ಏಕಕಾಲದಲ್ಲಿ ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 

ಪಾಕ್ ನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ, ಅಲ್ಲಿನ ಸುಧಾರಣೆಗಳ ಬಗ್ಗೆ ನಡೆದ ಚರ್ಚೆ ವೇಳೆ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದಕ್ಕೆ ಜೈಶಂಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com