ಶ್ರದ್ಧಾ ವಾಲ್ಕರ್ ಹತ್ಯೆ: ಆರೋಪಿ ಅಫ್ತಾಬ್ ಪೂನಾವಾಲಾ ಜಾಮೀನು ಅರ್ಜಿ ವಿಚಾರಣೆ ಡಿ.22ಕ್ಕೆ ಮುಂದೂಡಿಕೆ

ತನ್ನೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಲ್ಕರ್ ಅವರನ್ನು ಕೊಂದು, ಮೃತ ದೇಹವನ್ನು ತುಂಡುಗಳನ್ನಾಗಿ ಕತ್ತರಿಸಿದ್ದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾ, ತಾನು ವಕಾಲತ್ತಿಗೆ ಸಹಿ ಮಾಡಿದ್ದೇನೆ. ಆದರೆ, ಈ ಮೂಲಕ ತನ್ನ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿದಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಫ್ತಾಬ್ ಅಮಿನ್ ಪೂನಾವಾಲ
ಅಫ್ತಾಬ್ ಅಮಿನ್ ಪೂನಾವಾಲ

ನವದೆಹಲಿ: ತನ್ನೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಲ್ಕರ್ ಅವರ ಕತ್ತು ಹಿಸುಕಿ ಕೊಂದು, ಆಕೆಯ ಮೃತ ದೇಹವನ್ನು ತುಂಡುಗಳನ್ನಾಗಿ ಕತ್ತರಿಸಿದ್ದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾ, ತಾನು ವಕಾಲತ್ತಿಗೆ ಸಹಿ ಮಾಡಿದ್ದೇನೆ. ಆದರೆ, ಈ ಮೂಲಕ ತನ್ನ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿದಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವೃಂದಾ ಕುಮಾರಿ ಎದುರು ಹಾಜರುಪಡಿಸಲಾಯಿತು.

ಮೊದಲು ವಕೀಲರು ನನ್ನೊಂದಿಗೆ ಮಾತನಾಡಲು ಮತ್ತು ನಂತರ ಜಾಮೀನು ಅರ್ಜಿಯನ್ನು ಹಿಂಪಡೆಯಲು ನಾನು ಬಯಸುತ್ತೇನೆ ಎಂದು ಪೂನಾವಾಲಾ ಅವರು ಅರ್ಜಿಯನ್ನು ಹಿಂತೆಗೆದುಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆಯೇ ಎಂಬ ಬಗ್ಗೆ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದರು.

ಜಾಮೀನು ಅರ್ಜಿಯನ್ನು ಬಾಕಿ ಇರಿಸಲಾಗುವುದು ಮತ್ತು ಆರೋಪಿ ವಕೀಲರನ್ನು ಭೇಟಿಯಾದ ನಂತರವೇ ಮನವಿಯನ್ನು ಇರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿಸೆಂಬರ್ 22 ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com