ಹೊಟೇಲ್ ರೂಂನಿಂದ ಸಂಪೂರ್ಣ ನಗ್ನವಾಗಿ ಹೊರಬಂದು, ಸಿಬ್ಬಂದಿಗೆ ಥಳಿಸಿದ ಮಹಿಳೆ: ವಿಡಿಯೋ ವೈರಲ್!

ಮಹಿಳೆಯೊಬ್ಬರು ಸಂಪೂರ್ಣ ನಗ್ನವಾಗಿ ಹೊರಬಂದು ಹೋಟೆಲ್ ಸಿಬ್ಬಂದಿಯನ್ನು ಹಿಡಿದು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಜೈಪುರ: ಮಹಿಳೆಯೊಬ್ಬರು ಸಂಪೂರ್ಣ ನಗ್ನವಾಗಿ ಹೊರಬಂದು ಹೋಟೆಲ್ ಸಿಬ್ಬಂದಿಯನ್ನು ಹಿಡಿದು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಆಫ್ರಿಕನ್ ಮೂಲದವಳು ಎನ್ನಲಾಗಿದೆ. ಯಾವುದೋ ವಿಚಾರಕ್ಕೆ ಮಹಿಳೆ ಹೋಟೆಲ್ ಸಿಬ್ಬಂದಿಗೆ ಥಳಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ. ವಿಡಿಯೋದಲ್ಲಿ ವಿದೇಶಿ ಮಹಿಳೆ ಹೋಟೆಲ್‌ನಲ್ಲಿ ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು. ಸಿಬ್ಬಂದಿ ಆಕೆಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ಆಕೆ ಗಲಾಟೆ ಮಾಡುತ್ತಿದ್ದಾಳೆ.

ಈ ವಿಡಿಯೋ ರಾಜಸ್ಥಾನದ ಜೈಪುರದ್ದು ಎಂದು ಹೇಳಲಾಗುತ್ತಿದೆ. ಗಲಾಟೆ ನಡೆದ ಬಳಿಕ ಪೊಲೀಸರನ್ನು ಕರೆಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ವಿಡಿಯೋವನ್ನು ಸಾಕ್ಷ್ಯಚಿತ್ರ ನಿರ್ಮಾಪಕಿ ಮತ್ತು ಕಾರ್ಯಕರ್ತೆ ದೀಪಿಕಾ ನಾರಾಯಣ್ ಭಾರದ್ವಾಜ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರಾಜಸ್ಥಾನದ ಪಂಚತಾರಾ ಹೋಟೆಲ್‌ನ ಸಿಬ್ಬಂದಿಗೆ ವಿದೇಶಿ ಮಹಿಳೆಯೊಬ್ಬರು ಥಳಿಸುವ ದೃಶ್ಯ ಕಂಡು ಬಂದಿದೆ. ಈ ವೇಳೆ ಆಕೆ ಬೆತ್ತಲೆಯಾಗಿ ಗಲಾಟೆ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.

ವಿಡಿಯೊದಲ್ಲಿ ವಿದೇಶಿ ಮಹಿಳೆ ಮಹಿಳಾ ಹೊಟೇಲ್ ಉದ್ಯೋಗಿಯ ಕೂದಲು ಎಳೆದುಕೊಂಡು ಹಲ್ಲೆ ನಡೆಸಿದ್ದಾಳೆ. ಇನ್ನು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com