ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ: ರಾಹುಲ್ ಗಾಂಧಿ

'ಭಾರತ್ ಜೋಡೋ ಯಾತ್ರೆ'ಯ ಮೂಲಕ ನಾನು "ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯುತ್ತಿದ್ದೇನೆ" ಎಂದು ರಾಹುಲ್ ಗಾಂಧಿ ಅವರು ಹೇಳಿದ್ದು, ಈ ಮೂಲಕ ಪಾದಯಾತ್ರೆಯನ್ನು ಪ್ರಶ್ನಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: 'ಭಾರತ್ ಜೋಡೋ ಯಾತ್ರೆ'ಯ ಮೂಲಕ ನಾನು "ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯುತ್ತಿದ್ದೇನೆ" ಎಂದು ರಾಹುಲ್ ಗಾಂಧಿ ಅವರು ಹೇಳಿದ್ದು, ಈ ಮೂಲಕ ಪಾದಯಾತ್ರೆಯನ್ನು ಪ್ರಶ್ನಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ರ‍್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ'ಯನ್ನು ತೆರೆಯುತ್ತಿದ್ದೇನೆ, ನಾನು ಈ ಯಾತ್ರೆಯನ್ನು ಏಕೆ ಮಾಡುತ್ತಿದ್ದೇನೆ ಎಂದು ಕೇಳುವ ಬಿಜೆಪಿ ನಾಯಕರಿಗೆ ಇದು ನನ್ನ ಪ್ರತಿಕ್ರಿಯೆ" ಎಂದು ಹೇಳಿದರು.

ಯಾತ್ರೆಯು 100 ದಿನಗಳನ್ನು ಪೂರೈಸಿದೆ. ಈ ಹಾದಿಯಲ್ಲಿ ಬಿಜೆಪಿ ಕಚೇರಿಗಳ ಮೇಲೆ ನಿಂತು ಯಾತ್ರೆ ವೀಕ್ಷಿಸುತ್ತಿದ್ದ ಹಲವು ಸ್ನೇಹಿತರನ್ನು ಭೇಟಿ ಮಾಡಿದೆ. ಮೊದಮೊದಲು ನಾನು ಕೈಬೀಸಿದರೆ ಅವರು ಪ್ರತಿಕ್ರಿಯಿಸುತ್ತಿರಲಿಲ್ಲ, ನಂತರ ಕೈಬೀಸಲು ಆರಂಭಿಸಿದರು, ಅವರಲ್ಲಿ (ಬಿಜೆಪಿಗರು) ಕೆಲವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಹೊರಟಿರುವುದೇಕೆ ಎಂದು ಕೇಳುತ್ತಾರೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇನೆ ಎಂಬುದೇ ನನ್ನ ಉತ್ತರ’ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಭಾಗಗಳು ವ್ಯಾಪ್ತಿಗೆ ಬರುವಂತೆ ಜನರ ಕುಂದುಕೊರತೆಗಳನ್ನು ನಿವಾರಿಸಲು ಸರಕಾರವು ಸಾಮಾನ್ಯ ಜನರನ್ನು ತಲುಪಲು ರಾಜಸ್ಥಾನದ ಕ್ಯಾಬಿನೆಟ್‌  ಪ್ರತಿ ತಿಂಗಳಿಗೊಮ್ಮೆ ಇದೇ ರೀತಿಯ ಪಾದಯಾತ್ರೆಯನ್ನು ಕೈಗೊಂಡರೆ ಉತ್ತಮವಾಗುತ್ತದೆ ಎಂದು ಇದೇ ವೇಳೆ ಸಲಹೆ ನೀಡಿದರು.

ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖ್ಯಮಂತ್ರಿಗಳು, ಸಂಸದರು ಮತ್ತು ಶಾಸಕರ ಮಕ್ಕಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕಲಿಯುತ್ತಾರೆ ಹಾಗೂ ಅವರು ಇಂಗ್ಲಿಷ್ ಭಾಷೆಯ ಬಳಕೆಯ ವಿರುದ್ಧ ಮಾತನಾಡುತ್ತಾರೆ ಎಂದು ಶಾಲೆಗಳಲ್ಲಿ ಇಂಗ್ಲಿಷ್ ಬಳಕೆಯನ್ನು ಟೀಕಿಸಿದ್ದಕ್ಕಾಗಿ ಬಿಜೆಪಿ ನಾಯಕರನ್ನು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com