ಶೋಪಿಯಾನ್ ಎನ್ಕೌಂಟರ್: ಮೂವರು ಎಲ್ಇಟಿ ಉಗ್ರರ ಹೊಡೆದುರುಳಿಸಿದ ಸೇನಾಪಡೆ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
Published: 20th December 2022 08:43 AM | Last Updated: 20th December 2022 12:18 PM | A+A A-

ಸಂಗ್ರಹ ಚಿತ್ರ
ಶೋಪಿಯಾನ್ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಶೋಪಿಯಾನ್ ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿಗಳು ದೊರೆತ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.
ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಸೇನಾಪಡೆ ಸ್ಥಳವನ್ನು ಸುತ್ತುವರೆದು ಕಾರ್ಯಾಚರಣೆಯನ್ನು ಎನ್ಕೌಂಟರ್ ಆಗಿ ಬದಲಿಸಿದರು. ಇದರಂತೆ ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡಿ ಇದೀಗ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಪಾಕ್ ಮೂಲದ ಎಲ್‌ಇಟಿ ಕಮಾಂಡರ್‌ನ ಆಸ್ತಿ ಜಪ್ತಿ
ಮೂವರ ಪೈಕಿ ಇಬ್ಬರ ಗುರುತು ಪತ್ತೆಯಾಗಿದೆ. ಇಬ್ಬರು ಉಗ್ರರನ್ನು ಲತೀಫ್ ಲೋನೆ ಮತ್ತು ಉಮೆರ್ ನಜೀರ್ ಎಂದು ಗುರ್ತಿಸಲಾಗಿದೆ.
ಲತೀಫ್ ಕಾಶ್ಮೀರ್ ಪಂಡಿತ್ ಪುರಾನಾ ಕೃಷ್ಣ ಭಟ್ ಹತ್ಯೆ ಪಾಲ್ಗೊಂಡಿದ್ದು, ಉಮೆರ್ ಅನಂತ್ ನಾಗ್ ಜಿಲ್ಲೆಯಲ್ಲಿ ನೇಪಾಳ ಪ್ರಜೆ ಟಿಲ್ ಬಹದ್ದೂರು ಥಾಪಾ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹತ್ಯೆಯಾದ ಮೂವರು ಉಗ್ರರಿಂದ ಸೇನಾಪಡೆ ಎಕೆ 47 ರೈಫಲ್, 2 ಪಿಸ್ತೂಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಕಾಶ್ಮೀರದ ಎಡಿಜಿಪಿ ಹೇಳಿದ್ದಾರೆ.