ಅಲ್ ಖೈದಾ ಜೊತೆ ಪಿಎಫ್‌ಐ ಸಂಪರ್ಕ ಹೊಂದಿದೆ: ರಾಷ್ಟ್ರೀಯ ತನಿಖಾ ಸಂಸ್ಥೆ ವರದಿ
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯು ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದೆ ಎಂದು ಕೇರಳದ ನ್ಯಾಯಾಲಯದ ಮುಂದೆ ಸಲ್ಲಿಸಿದ ವರದಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.
Published: 21st December 2022 12:41 PM | Last Updated: 21st December 2022 12:41 PM | A+A A-

ಸಂಗ್ರಹ ಚಿತ್ರ
ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯು ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದೆ ಎಂದು ಕೇರಳದ ನ್ಯಾಯಾಲಯದ ಮುಂದೆ ಸಲ್ಲಿಸಿದ ವರದಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.
ಪಿಎಫ್‌ಐ ನಾಯಕರು ವಿವಿಧ ವಿಧಾನಗಳ ಮೂಲಕ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತನಿಖಾ ಸಂಸ್ಥೆ ವರದಿಯಲ್ಲಿ ಆರೋಪಿಸಿದೆ.
ನಿಷೇಧಿತ ಸಂಘಟನೆಯು ರಹಸ್ಯ ವಿಭಾಗವನ್ನು ನಡೆಸುತ್ತಿದೆ. ಅವರು ಅದನ್ನು ಬೇರೆ ಸಮಯದಲ್ಲಿ ಬಹಿರಂಗಪಡಿಸಲು ಬಯಸಿದ್ದರು ಎಂದು ಎನ್ಐಎ ಹೇಳಿಕೊಂಡಿದೆ.
ಇದನ್ನೂ ಓದಿ: ಪಿಎಫ್ಐ ಮೇಲಿನ ನಿಷೇಧ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
'ಇತ್ತೀಚಿನ ದಾಳಿಗಳಲ್ಲಿ, ಎನ್ಐಎ ಕೆಲವು ಕೆಲವು ಸಾಧನಗಳನ್ನು ವಶಪಡಿಸಿಕೊಂಡಿದೆ. ಆ ಸಾಧನಗಳನ್ನು ಸ್ಕ್ಯಾನ್ ಮಾಡುವಾಗ, ಪಿಎಫ್‌ಐ ನಾಯಕರು ಅಲ್ ಖೈದಾದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ತಿಳಿಯಿತು. ಅವರಿಗೆ ರಹಸ್ಯ ವಿಭಾಗವಿತ್ತು' ಎಂದು ಮೂಲವೊಂದು ತಿಳಿಸಿದೆ.
ಇತ್ತೀಚಿಗೆ ನಡೆಸಿದ ರಾಷ್ಟ್ರವ್ಯಾಪಿ ದಾಳಿಗಳ ಸಂದರ್ಭದಲ್ಲಿ ಪಿಎಫ್‌ಐನ ಸಂಪೂರ್ಣ ಜಾಲವನ್ನು ಎನ್ಐಎ ಭೇದಿಸಿತ್ತು. ನಂತರ ಪಿಎಫ್‌ಐ ಅನ್ನು ನಿಷೇಧಿಸಲಾಯಿತು ಮತ್ತು ಅದರ ಎಲ್ಲಾ ನಾಯಕರನ್ನು ಬಂಧಿಸಲಾಯಿತು.