ಮದುವೆಯಾಗಲು ಹೆಣ್ಣು ಬೇಕು: 'ಬ್ಯಾ೦ಡ್ ಬಾಜಾ ಬರಾತ್' ನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ 50 ಬ್ಯಾಚುಲರ್‌ಗಳ ಮೆರವಣಿಗೆ

ಮಹಾರಾಷ್ಟ್ರದಲ್ಲಿ ಪುರುಷ- ಮಹಿಳೆಯರ ಅನುಪಾತ ಕುಸಿತ ಸಮಸ್ಯೆಯನ್ನು ಮುಂದಿಟ್ಟುಕೊಂಡು ವಧು ಹುಡುಕಿಕೊಡಿ ಎಂದು 50ಕ್ಕೂ ಹೆಚ್ಚು ಅರ್ಹ ಬ್ಯಾಚುಲರ್ ಗಳು, ಮದು ಮಗನ ಗೆಟಾಪ್ ನಲ್ಲಿ ಕುದುರೆ ಸವಾರಿ, 'ಬ್ಯಾ೦ಡ್ ಬಾಜಾ ಬರಾತ್ ನೊಂದಿಗೆ  ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಸಾಗಿದರು.  
ಕುದುರೆ ಸವಾರಿಯೊಂದಿಗೆ ಬ್ಯಾಚುಲರ್ ಗಳ ಮೆರವಣಿಗೆ ಚಿತ್ರ
ಕುದುರೆ ಸವಾರಿಯೊಂದಿಗೆ ಬ್ಯಾಚುಲರ್ ಗಳ ಮೆರವಣಿಗೆ ಚಿತ್ರ

ಪುಣೆ: ಮಹಾರಾಷ್ಟ್ರದಲ್ಲಿ ಪುರುಷ- ಮಹಿಳೆಯರ ಅನುಪಾತ ಕುಸಿತ ಸಮಸ್ಯೆಯನ್ನು ಮುಂದಿಟ್ಟುಕೊಂಡು ವಧು ಹುಡುಕಿಕೊಡಿ ಎಂದು 50ಕ್ಕೂ ಹೆಚ್ಚು ಅರ್ಹ ಬ್ಯಾಚುಲರ್ ಗಳು, ಮದು ಮಗನ ಗೆಟಾಪ್ ನಲ್ಲಿ ಕುದುರೆ ಸವಾರಿ, 'ಬ್ಯಾ೦ಡ್ ಬಾಜಾ ಬರಾತ್ ನೊಂದಿಗೆ  ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಸಾಗಿದ್ದಾರೆ.  

ನಂತರ, ರಾಜ್ಯದಲ್ಲಿ ಪುರುಷ-ಮಹಿಳಾ ಅನುಪಾತ ಸರಿಪಡಿಸಲು ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳು (ಪಿಸಿಪಿಎನ್ ಡಿಟಿ) ಕಾಯ್ದೆಯನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರುವಂತೆ ಮನವಿ ಸಲ್ಲಿಸಿದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ( 2019-21) ಪ್ರಕಾರ, ಮಹಾರಾಷ್ಟ್ರದಲ್ಲಿ ಪ್ರತಿ 1,000 ಪುರುಷರಿಗೆ 920 ಮಹಿಳೆಯರಿದ್ದಾರೆ. 

ಮದುವೆ ವಿಚಾರ ಪ್ರಸ್ತಾಪವಾದಗಲೆಲ್ಲಾ, ಹುಡುಗಿ ಕೇಳುವ ಮೊದಲ ಪ್ರಶ್ನೆ, ನಗರದಲ್ಲಿ ವಾಸಿಸುತ್ತಿದ್ದೀರಾ, ಉದ್ಯೋಗವಿದೆಯೇ ಇಲ್ಲವೇ ಎಂದು ಕೇಳುತ್ತಿರುವುದಾಗಿ 29 ವರ್ಷದ ಶಿಲಾವಂತ್ ಕ್ಷೀರಸಾಗರ ಹೇಳಿದರು. ಇವರು ಕೂಡಾ ವಧು ಹುಡುಕುತ್ತಿರುವ ಬ್ಯಾಚುಲರ್ ಗಳಲ್ಲಿ ಒಬ್ಬರಾಗಿದ್ದಾರೆ.

ಟೈಲರಿಂಗ್ ವೃತ್ತಿ ಮಾಡುತ್ತಿರುವ 27 ವರ್ಷದ ಔದುಂಬರ್ ಮಾಲಿ ಅವರ ಸಮಸ್ಯೆಯೂ ಇದೇ ಆಗಿದೆ. ಇಲ್ಲಿಯವರೆಗೂ 8 ಹುಡುಗಿಯನ್ನು ನೋಡಲಾಗಿದೆ. ಹುಡುಗಿ ಕುಟುಂಬದವರ ಒಂದೇ ಪ್ರಶ್ನೆ ಏನೆಂದರೆ ಸರಿಯಾದ ಉದ್ಯೋಗವಿದೆಯೇ ಅಥವಾ ಇಲ್ಲವೇ ಎಂಬುದಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಅರ್ಹ ಬ್ಯಾಚುಲರ್ ಗಳಿಗೆ ವಧು ಸಿಗುತ್ತಿಲ್ಲ, ಪಿಸಿಪಿಎನ್ ಡಿಟಿ ಕಾಯ್ದೆ ಸರಿಯಾಗಿ ಅನುಷ್ಟಾನವಾದರೆ ವಧುವಿನ ಸಮಸ್ಯೆ ಸ್ವಲ್ಪ ಸುಧಾರಿಸಬಹುದೇನೂ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಆಯೋಜಕ ಜ್ಯೋತಿ ಕ್ರಾಂತಿ ಪರಿಷತ್ ಸ್ಥಾಪಕ ರಮೇಶ್ ಭಾರಸ್ಕರ್ ಮಾತನಾಡಿ, ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಸಮಸ್ಯೆಯಿಂದಾಗಿ ಪುರುಷ- ಮಹಿಳೆಯರ ಅನುಪಾತದಲ್ಲಿ ಕುಸಿತವಾಗಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com