ಭಾರತದ ಒಡಿಶಾದಲ್ಲಿ ರಷ್ಯಾದ ಶ್ರೀಮಂತ ಸಂಸದ ನಿಗೂಢ ಸಾವು; ತನಿಖೆಗಿಳಿದ ಪೊಲೀಸರು!

 ರಷ್ಯಾ-ಉಕ್ರೇನ್ ಯುದ್ಧವನ್ನು ತೀವ್ರವಾಗಿ ವಿರೋಧಿಸಿದ್ದ ರಷ್ಯಾದ ಸಂಸದ 64 ವರ್ಷದ ಪಾವೆಲ್ ಆಂಟೊನೊವ್ ಭಾರತದ ಒಡಿಶಾದ ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪವೆಲ್ ಆಂಟೊನೊವ್
ಪವೆಲ್ ಆಂಟೊನೊವ್
Updated on

ಒಡಿಶಾ: ರಷ್ಯಾ-ಉಕ್ರೇನ್ ಯುದ್ಧವನ್ನು ತೀವ್ರವಾಗಿ ವಿರೋಧಿಸಿದ್ದ ರಷ್ಯಾದ ಸಂಸದ 64 ವರ್ಷದ ಪಾವೆಲ್ ಆಂಟೊನೊವ್ ಭಾರತದ ಒಡಿಶಾದ ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಇನ್ನು ಡಿಸೆಂಬರ್ 22 ಮತ್ತು 25ರಂದು, ಇಬ್ಬರು ರಷ್ಯಾದ ಪ್ರವಾಸಿಗರು ಭಾರತದ ಒಡಿಶಾದ ಹೋಟೆಲ್‌ನಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದರು. ವರದಿಗಳ ಪ್ರಕಾರ, ಡಿಸೆಂಬರ್ 21 ರಂದು ನಾಲ್ವರು ರಷ್ಯಾದ ಪ್ರವಾಸಿಗರು ಒಡಿಶಾದ ರಾಯಗಡದಲ್ಲಿರುವ ಸಾಯಿ ಇಂಟರ್ನ್ಯಾಷನಲ್ ಹೋಟೆಲ್‌ಗೆ ಭೇಟಿ ನೀಡಿದ್ದರು.

ಅವರಲ್ಲಿ ಒಬ್ಬರಾದ ವ್ಲಾಡಿಮಿರ್ ಬುಡಾನೋವ್ ಅವರು ಡಿಸೆಂಬರ್ 22ರಂದು ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬುಡಾನೋವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಇನ್ನು ಡಿಸೆಂಬರ್ 25ರಂದು ಬುಡಾನೋವ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಪಾವೆಲ್ ಆಂಟೋವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶರ್ಮಾ ಖಚಿತಪಡಿಸಿದ್ದಾರೆ.

ಆಂಟೊನೊವ್ ಅವರು ಒಡಿಶಾದ ರಾಯಗಡ ಪ್ರದೇಶದಲ್ಲಿ ತಮ್ಮ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಅವರ ಸಾವನ ಸುದ್ದಿ ಬಂದಿದೆ. ಪೊಲೀಸರ ಪ್ರಕಾರ, ಅವರು ಹೋಟೆಲ್‌ನ ಮೂರನೇ ಮಹಡಿಯ ಕಿಟಕಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com