ಸುಖೋಯ್ ಸು-30 ಮೂಲಕ ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ಯಶಸ್ವಿ ಪರೀಕ್ಷೆ!

ಭಾರತೀಯ ವಾಯುಪಡೆಯು ಸುಖೋಯ್ ಸು-30 ಯುದ್ಧ ವಿಮಾನದ ಮೂಲಕ ಬ್ರಹ್ಮೋಸ್ ವಾಯು ಉಡಾವಣಾ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು 400 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ.
ಸುಖೋಯ್ ಸು-30
ಸುಖೋಯ್ ಸು-30

ನವದೆಹಲಿ: ಭಾರತೀಯ ವಾಯುಪಡೆಯು ಸುಖೋಯ್ ಸು-30 ಯುದ್ಧ ವಿಮಾನದ ಮೂಲಕ ಬ್ರಹ್ಮೋಸ್ ವಾಯು ಉಡಾವಣಾ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದು 400 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ.

ಕ್ಷಿಪಣಿಯನ್ನು ಸು-30 ಎಂಕೆಐ ಯುದ್ಧ ವಿಮಾನದಿಂದ ಉಡಾಯಿಸಲಾಯಿತು. ಅಲ್ಲದೆ ಅದು ಬಂಗಾಳಕೊಲ್ಲಿಯಲ್ಲಿ ಗುರಿಯನ್ನು ನಿಖರವಾಗಿ ಹೊಡೆದಿದೆ. ಇದು ವಾಯು-ಉಡಾವಣಾ ಆವೃತ್ತಿಯ ಕ್ಷಿಪಣಿಯ ಆಂಟಿ-ಶಿಪ್ ಆವೃತ್ತಿಯ ಪರೀಕ್ಷೆಯಾಗಿದೆ ಎಂದು ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಯುಪಡೆಗೆ ವ್ಯೂಹಾತ್ಮಕ ಬಲ
ಈ ಪರೀಕ್ಷೆಯೊಂದಿಗೆ, ಐಎಎಫ್ ಸು-30 ಎಂಕೆಐ ಯುದ್ಧ ವಿಮಾನದಿಂದ ಭೂಮಿ ಅಥವಾ ಸಮುದ್ರ ಗುರಿಗಳ ವಿರುದ್ಧ ದೀರ್ಘಾವಧಿಯಲ್ಲಿ ನಿಖರವಾದ ದಾಳಿಯನ್ನು ನಡೆಸುವಲ್ಲಿ ಗಮನಾರ್ಹ ಸಾಮರ್ಥ್ಯ ವರ್ಧನೆಯನ್ನು ಸಾಧಿಸಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಸರ್ಕಾರದ ಪ್ರಕಾರ, SU-30MKI ವಿಮಾನದ ಹೆಚ್ಚಿನ ಕಾರ್ಯಕ್ಷಮತೆಯ ಜೊತೆಗೆ ಕ್ಷಿಪಣಿಯ ದೀರ್ಘ ವ್ಯಾಪ್ತಿಯ ಸಾಮರ್ಥ್ಯವು ವಾಯುಪಡೆಯನ್ನು ವ್ಯೂಹಾತ್ಮಕವಾಗಿ ಬಲಪಡಿಸುತ್ತದೆ. ಭವಿಷ್ಯದ ಯುದ್ಧದ ಸಂದರ್ಭದಲ್ಲಿ ಶತ್ರು ರಾಷ್ಟ್ರದ ಮೇಲೆ ದಾಳಿ ಮಾಡಲು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಭಾರತೀಯ ವಾಯುಪಡೆ, ಭಾರತೀಯ ನೌಕಾಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ), ಬಿಎಪಿಎಲ್ ಮತ್ತು ಎಚ್‌ಎಎಲ್‌ಗಳ ಸಮರ್ಪಿತ ಪ್ರಯತ್ನಗಳು ಈ ಸಾಧನೆಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com