2022 ರಲ್ಲಿ ಕಾಶ್ಮೀರದಲ್ಲಿ 186 ಉಗ್ರರ ಹತ್ಯೆ, 159 ಭಯೋತ್ಪಾದಕರ ಬಂಧನ
2022 ರಲ್ಲಿ 56 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಒಟ್ಟು 186 ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು 159 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಯಶಸ್ವಿ ಕಾರ್ಯಾಚರಣೆ...
Published: 31st December 2022 05:13 PM | Last Updated: 31st December 2022 10:02 PM | A+A A-

ಜಮ್ಮು-ಕಾಶ್ಮೀರ
ಶ್ರೀನಗರ: 2022 ರಲ್ಲಿ 56 ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಒಟ್ಟು 186 ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು 159 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಯಶಸ್ವಿ ಕಾರ್ಯಾಚರಣೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಶನಿವಾರ ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ "ಶೂನ್ಯ ಭಯೋತ್ಪಾದನೆ" ಚಟುವಟಿಕೆ ಗುರಿ ಸಾಧಿಸಲು ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಮೂಲಭೂತ ಹಕ್ಕುಗಳು 'ಐಷಾರಾಮಿ' ಮತ್ತು 'ಅರ್ಹತೆ'ಗಳಾಗಿ ಮಾರ್ಪಟ್ಟಿವೆ: ಸಿಜೆಐಗೆ ಮೆಹಬೂಬಾ ಪತ್ರ
ಇಂದು ವರ್ಷಾಂತ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿಲ್ಬಾಗ್ ಸಿಂಗ್ ಅವರು, 2022ರಲ್ಲಿ ಗ್ರೆನೇಡ್ ಮತ್ತು ಐಇಡಿ ದಾಳಿಗಳನ್ನು ನಡೆಸಲು ನಿಯೋಜಿಸಲಾಗಿದ್ದ ತಲಾ ನಾಲ್ಕರಿಂದ ಐದು ಸದಸ್ಯರನ್ನು ಒಳಗೊಂಡಿದ್ದ 146 ಪಾಕಿಸ್ತಾನಿ ಭಯೋತ್ಪಾದಕ ಘಟಕಗಳನ್ನು ಸಹ ಭೇದಿಸಲಾಗಿದೆ ಎಂದು ಹೇಳಿದರು.
ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 100 ಯುವಕರು ಭಯೋತ್ಪಾದನೆಗೆ ಸೇರಿದ್ದಾರೆ. ಇದು ಇತ್ತಿಚೀನ ವರ್ಷಗಳಲ್ಲಿ ಅತ್ಯಂತ ಕಡಿಮೆ. ಸಕ್ರಿಯ ಭಯೋತ್ಪಾದಕರ ಸಂಖ್ಯೆಯನ್ನು ಎರಡು-ಅಂಕಿಗೆ ಇಳಿಸಲು ಭದ್ರತಾ ಪಡೆಗಳು ಕೆಲಸ ಮಾಡುತ್ತಿವೆ. ಉಗ್ರ ಸಂಘಟನೆ ಸೇರಿದ ಹಲವು ಯುವಕರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.