ನೂಪುರ್ ಶರ್ಮಾಗೆ ಸುಪ್ರೀಂ ತರಾಟೆ: ಆಡಳಿತ ಪಕ್ಷ ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದ ಕಾಂಗ್ರೆಸ್!
ಪ್ರವಾದಿ ಕುರಿತ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದ್ದು, ಆಡಳಿತ ಪಕ್ಷ ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಟೀಕಿಸಿದೆ.
Published: 01st July 2022 04:16 PM | Last Updated: 01st July 2022 04:16 PM | A+A A-

ಜೈರಾಂ ರಮೇಶ್
ನವದೆಹಲಿ: ಪ್ರವಾದಿ ಕುರಿತ ಹೇಳಿಕೆ ವಿಚಾರವಾಗಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದ್ದು, ಆಡಳಿತ ಪಕ್ಷ ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಟೀಕಿಸಿದೆ.
LIVE: Congress Party Briefing by Shri @PChidambaram_IN and Shri @Jairam_Ramesh at AICC HQ.#5YearsOfGSTMess https://t.co/ujA89rY1p5
— Congress (@INCIndia) July 1, 2022
ಪ್ರವಾದಿ ವಿರುದ್ಧದ ಹೇಳಿಕೆಯ ಮೂಲಕ ದೇಶಾದ್ಯಂತ ಕೋಮು ಭಾವನೆಗಳನ್ನು ಕೆರಳಲು ಏಕಾಂಗಿ ಹೊಣೆಗಾರರಾಗಿರುವ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ಸರಿಯಾಗಿಯೇ ಕರೆದಿದೆ.. ಈ ಬಗ್ಗೆ ಆಡಳಿತ ಪಕ್ಷವು ನಾಚಿಕೆ ಅವಮಾನದಿಂದ ತಲೆ ತಗ್ಗಿಸಬೇಕು ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.
ಇದನ್ನೂ ಓದಿ: ನೂಪುರ್ ಶರ್ಮ ಲೂಸ್ ಟಾಕ್ ನಿಂದ ದೇಶಕ್ಕೆ ಬೆಂಕಿ ಬಿತ್ತು, ಆಕೆ ಇಡೀ ದೇಶದ ಕ್ಷಮೆ ಯಾಚಿಸಬೇಕು: ಸುಪ್ರೀಂ ಕೋರ್ಟ್ ಕೆಂಡಾಮಂಡಲ
ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್‌ನ ಅವಲೋಕನಗಳ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, "ವಿನಾಶಕಾರಿ ವಿಭಜಕ ಸಿದ್ಧಾಂತಗಳ" ವಿರುದ್ಧ ಹೋರಾಡುವ ಪಕ್ಷದ ಸಂಕಲ್ಪವನ್ನು ನ್ಯಾಯಾಲಯವು ಬಲಪಡಿಸಿದೆ. ದೇಶದಾದ್ಯಂತ ಕೋಮು ಭಾವನೆಗಳನ್ನು ಹೊತ್ತಿಸಲು ಏಕಾಂಗಿ ಹೊಣೆಗಾರರಾಗಿರುವ ಬಿಜೆಪಿ ವಕ್ತಾರರನ್ನು ನ್ಯಾಯಾಲಯವು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದೆ. ಅವರು ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಟೈಲರ್ ಹತ್ಯೆ: ಅಜ್ಮೀರ್‌ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಧರ್ಮಗುರು ಸೇರಿ ಮೂವರ ಬಂಧನ
"ಇಡೀ ದೇಶವನ್ನು ಪ್ರತಿಧ್ವನಿಸುವ ಸುಪ್ರೀಂ ಕೋರ್ಟ್‌ನ ಈ ಹೇಳಿಕೆಗಳು ಅಧಿಕಾರದಲ್ಲಿರುವ ಪಕ್ಷವು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಬೇಕು. ಪ್ರವಾದಿ ಮೊಹಮ್ಮದ್ ವಿರುದ್ಧ ಶರ್ಮಾ ಅವರ "ಗೊಂದಲಕಾರಿ" ಹೇಳಿಕೆಗಾಗಿ ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿದೆ. ಇದು ದೇಶದಾದ್ಯಂತ ದುರದೃಷ್ಟಕರ ಘಟನೆಗಳು ಮತ್ತು ಭಾವನೆಗಳನ್ನು ಪ್ರಚೋದಿಸಿತು ಎಂದು ಹೇಳಿದರು.
ಇದನ್ನೂ ಓದಿ: ಉದಯಪುರ: ಟೈಲರ್‌ನ ಅಮಾನುಷ ಹತ್ಯೆ ಖಂಡಿಸಿ ಬೃಹತ್ ರ್ಯಾಲಿ; ಸಾವಿರಾರು ಮಂದಿ ಭಾಗಿ
ಸುಪ್ರೀಂ ಕೋರ್ಟ್ ಈ ಸರ್ಕಾರಕ್ಕೆ ಕನ್ನಡಿ ಹಿಡಿದಿದೆ ಮತ್ತು ಅದರ ಕಾರ್ಯಗಳ "ಮೂಲ ಕೊಳಕು" ಎಂದು ಕರೆದಿದೆ. ಬಿಜೆಪಿಯು ಕೋಮು ಭಾವನೆಗಳನ್ನು ಕೆರಳಿಸುವ ಮೂಲಕ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂಬುದು ರಹಸ್ಯವಲ್ಲ. ಇಂದು, ಸುಪ್ರೀಂ ಕೋರ್ಟ್ ಈ ವಿಧ್ವಂಸಕ ವಿಭಜಕ ಸಿದ್ಧಾಂತಗಳ ವಿರುದ್ಧ ಹೋರಾಡುತ್ತಿರುವ ನಮ್ಮಲ್ಲಿ ಪ್ರತಿಯೊಬ್ಬರ ಸಂಕಲ್ಪವನ್ನು ಬಲಪಡಿಸಿದೆ. ರಾಜಕೀಯ ಲಾಭಕ್ಕಾಗಿ ರಾಷ್ಟ್ರವನ್ನು ಗೊಂದಲದಲ್ಲಿ ಮುಳುಗಿಸುವ ಎಲ್ಲಾ ರೀತಿಯ "ಧ್ರುವೀಕರಣದ ರಾಷ್ಟ್ರವಿರೋಧಿ ಶಕ್ತಿಗಳ" ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಹೋರಾಟವನ್ನು ಎಂದಿಗೂ ನಿಲ್ಲಿಸುವುದಿಲ್ಲ ಮತ್ತು ಅವರ "ವಿಕೃತ ಕ್ರಮಗಳ" ಪರಿಣಾಮಗಳನ್ನು ಎಲ್ಲಾ ಭಾರತೀಯ ನಾಗರಿಕರು ಭರಿಸಲಿ ಎಂದು ರಮೇಶ್ ಹೇಳಿದರು.
ಇದನ್ನೂ ಓದಿ: ಉದಯ್ ಪುರ ಟೈಲರ್ ಶಿರಚ್ಛೇದ ಮಾಡಿದ ಹಂತಕರಿಗೆ ಪಾಕ್ ಸಂಘಟನೆ ನಂಟು, 2014 ರಲ್ಲಿ ಕರಾಚಿಗೆ ಭೇಟಿ!
ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿಯವರ ವಿರುದ್ಧ ಶರ್ಮಾ ಮಾಡಿದ ಹೇಳಿಕೆಯು ದೇಶಾದ್ಯಂತ ಪ್ರತಿಭಟನೆಗಳನ್ನು ಪ್ರಚೋದಿಸಿತು ಮತ್ತು ಅನೇಕ ಗಲ್ಫ್ ದೇಶಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಲು ಇದು ಕಾರಣವಾಯಿತು. ನಂತರ ಬಿಜೆಪಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು.