ಅಜ್ಮೀರ್ ದರ್ಗಾದಲ್ಲಿ 'ಮಹಾ' ಮುಖ್ಯಮಂತ್ರಿ ಶಿಂಧೆ ಪರವಾಗಿ ಚಾದರ್ ಅರ್ಪಣೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ಅವರು ದರ್ಗಾದಲ್ಲಿ ಚಾದರ್ ಅರ್ಪಿಸಿದರು.
Published: 03rd July 2022 03:53 PM | Last Updated: 03rd July 2022 03:53 PM | A+A A-

ಅಜ್ಮೀರ್ ದರ್ಗಾ
ಅಜ್ಮೀರ್: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ಅವರು ದರ್ಗಾದಲ್ಲಿ ಚಾದರ್ ಅರ್ಪಿಸಿದರು.
ಖಾದಿಮ್ ಸೈಯದ್ ವಲಿ ಮೊಹಮ್ಮದ್ ನಿಯಾಜಿ ಅವರು ಶಿಂಧೆ ಅವರ ಪರವಾಗಿ ಚಾದರ್ ಮತ್ತು ಹೂವುಗಳೊಂದಿಗೆ ಗರೀಬ್ ನವಾಜ್ ಅವರ ದರ್ಗಾಕ್ಕೆ ಭೇಟಿ ನೀಡಿದರು. ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ: ಶಿವಸೇನೆ ರೆಬೆಲ್ ಬಣದ ಮೇಲುಗೈ: ಬಿಜೆಪಿ ಅಭ್ಯರ್ಥಿ ನಾರ್ವೇಕರ್ ಸ್ಪೀಕರ್ ಆಗಿ ಆಯ್ಕೆ!
ಬಳಿಕ ಮಾತನಾಡಿದ ಖಾದಿಮ್ ನಿಯಾಜಿ ಅವರು, 'ಶಿಂಧೆ ಸಾಹಬ್ ಗರೀಬ್ ನವಾಜ್ ಮೇಲೆ ನಂಬಿಕೆ ಹೊಂದಿದ್ದಾರೆ. ಅವರು ನಿಯಮಿತವಾಗಿ ಇಲ್ಲಿಗೆ ಬರುತ್ತಿದ್ದರು ಎಂದು ಹೇಳಿದರು. ಮುಖ್ಯಮಂತ್ರಿಯಾದ ಮೇಲೆ ಅವರ ಸೂಚನೆಯಂತೆ ಇಂದು ಚಾದರ ಅರ್ಪಿಸಿ ಎಲ್ಲ ಸಂಕಷ್ಟ ದೂರವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ಅಲ್ಲದೆ ಯಾವುದೇ ಅಡೆತಡೆಯಿಲ್ಲದೆ ಮಹಾರಾಷ್ಟ್ರ ಸರ್ಕಾರ ರಚನೆಯಾಗಲಿ ಮತ್ತು ಅವರ ನೇತೃತ್ವದಲ್ಲಿ ಮಹಾರಾಷ್ಟ್ರ ಸಂಪೂರ್ಣ ಅಭಿವೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.
ಮುಖ್ಯಮಂತ್ರಿ ಶಿಂಧೆ ಅವರು ಶೀಘ್ರದಲ್ಲೇ ಅಜ್ಮೀರ್ ಗೆ ಭೇಟಿ ನೀಡುವ ಬಗ್ಗೆ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು.