ಬಹಳ ದಿನಗಳಿಂದ ನನ್ನನ್ನು ತುಳಿಯಲಾಗಿತ್ತು: ವಿಶ್ವಾಸ ಮತ ಗೆದ್ದ ಬಳಿಕ ಏಕನಾಥ್ ಶಿಂಧೆ ಪ್ರತಿಕ್ರಿಯೆ

ಬಹಳ ದಿನಗಳಿಂದ ನನ್ನನ್ನು ತುಳಿಯಲಾಗಿತ್ತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ. 
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಮುಂಬೈ: ಬಹಳ ದಿನಗಳಿಂದ ನನ್ನನ್ನು ತುಳಿಯಲಾಗಿತ್ತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬಳಿಕ ವಿಜಯೋತ್ಸವ ಭಾಷಣ ಮಾಡಿದ ಶಿಂಧೆ, ಇವತ್ತು ಏನು ನಡೆಯಿತೋ ಅದು ಕೇವಲ ಒಂದು ದಿನದಲ್ಲ ಎಂದರು. 

ಚುನಾವಣೆಗಾಗಿ ಇಲ್ಲಿಗೆ ಬಂದಾಗ, ನನ್ನನ್ನು ಹೇಗೆ ನೋಡಿಕೊಳ್ಳಲಾಗಿತ್ತು ಎಂಬುದಕ್ಕೆ ಈ ಸದನದಲ್ಲಿರುವವರೇ ಸಾಕ್ಷಿಯಾಗಿದ್ದಾರೆ. ಬಹಳ ದಿನಗಳಿಂದ ನನ್ನನ್ನು ತುಳಿಯಲಾಗಿತ್ತು. ಇದಕ್ಕೆ ಉದ್ದವ್ ಠಾಕ್ರೆ ಬಣದಿಂದ ಬಂದಿರುವ ಸುನೀಲ್ ಪ್ರಭು ಕೂಡಾ ಸಾಕ್ಷಿಯಾಗಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಹೆಸರನ್ನು ಉಲ್ಲೇಖಿಸಿದ ಶಿಂಧೆ, ಮಹಾ ವಿಕಾಸ್ ಆಘಾದಿ ಸರ್ಕಾರ 2019 ನವೆಂಬರ್ ನಲ್ಲಿ ಅಧಿಕಾರಕ್ಕೆ ಬಂದ ನಂತರ ಶಿವಸೇನಾದಲ್ಲಿ 'ಅಪಘಾತ' ಸಂಭವಿಸಿರುವುದಾಗಿ ಹಿರಿಯ ಎನ್ ಸಿಪಿ ಮುಖಂಡರು ನನಗೆ ಹೇಳಿದ್ದರು ಎಂದರು.

ಮಹಾ ವಿಕಾಸ್ ಆಘಾಧಿ ಸರ್ಕಾರದ ರಚನೆಯನ್ನು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದರು. ಆದರೆ, ಮಹಾ ಆಘಾದಿ ಸರ್ಕಾರ ರಚನೆ ನಂತರ ಶಿವಸೇನಾ ಪಕ್ಷದಲ್ಲಿ ಅಪಘಾತ ಸಂಭವಿಸಿರುವುದಾಗಿ ಅಜಿತ್ ಪವಾರ್ ನನಗೆ ಹೇಳಿದ್ದರು. ನೀವು ಮುಖ್ಯಮಂತ್ರಿಯಾಗಲು ನಮ್ಮ ವಿರೋಧವೇನಿಲ್ಲ ಎಂದು ಉದ್ದವ್ ಠಾಕ್ರೆ ಅವರಿಗೆ ಶಿಂಧೆ ಹೇಳಿದರು. 

ಬಿಜೆಪಿ- ಶಿವಸೇನಾ ಮೈತ್ರಿ  ಸರ್ಕಾರ ಅಧಿಕಾರಕ್ಕೆ ಬಂದರೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಶೀಘ್ರದಲ್ಲಿಯೇ ಒಳ್ಳೆಯ ಹುದ್ದೆ ಸಿಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಮಗೆ ಹೇಳಿದ್ದಾಗಿ ಏಕನಾಥ್ ಶಿಂಧೆ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com