
ಸಿಧು ಮೂಸೆವಾಲಾ
ನವದೆಹಲಿ: ಖ್ಯಾತ ಪಂಜಾಬಿ ಗಾಯಕ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Delhi | A team of Spl Cell /NDR (New Delhi Range) apprehends 2 most wanted criminals of Lawrence Bishnoi-Goldy Brar Gang alliance. One of the arrested, Ankit was one of the shooters involved in Sidhu Moose Wala killing, and 2 other heinous cases of attempts to murder in Rajasthan
— ANI (@ANI) July 4, 2022
ಹಾಡಹಗಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದ ಶೂಟರ್ ಅಂಕಿತ್ ಸಿರ್ಸಾ ಅವರನ್ನು ದೆಹಲಿ ಪೊಲೀಸರ ವಿಶೇಷ ಘಟಕವು ಅವರ ಸಹಚರರೊಂದಿಗೆ ಬಂಧಿಸಿದೆ. ದೆಹಲಿ ಪೊಲೀಸ್ ಪಡೆಯ ವಿಶೇಷ ಸೆಲ್ ಎನ್ ಡಿ ಆರ್ ತಂಡವು ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ ಮೈತ್ರಿಯ ಇಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನು ಬಂಧಿಸಿದೆ.
ಇದನ್ನೂ ಓದಿ: ಮೂಸೆವಾಲಾ ಹತ್ಯೆ ಪ್ರಕರಣ: ವಕೀಲರು ಸಿಗ್ತಿಲ್ಲ, ಕೇಸ್ ವಿಚಾರಣೆ ದೆಹಲಿಗೆ ವರ್ಗಾಯಿಸಿ ಎಂದ ಬಿಷ್ಣೋಯಿ ತಂದೆ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್‌ಗಳಲ್ಲಿ ಅಂಕಿತ್ ಕೂಡ ಒಬ್ಬ. ಈತ ರಾಜಸ್ಥಾನದಲ್ಲಿ ನಡೆದ ಎರಡು ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮತ್ತೊಬ್ಬ ಬಂಧಿತ ಆರೋಪಿ ಸಚಿನ್ ಭಿವಾನಿ ಸಿಧು ಮೂಸ್ ವಾಲಾ ಪ್ರಕರಣದಲ್ಲಿ ನಾಲ್ವರು ಶೂಟರ್‌ಗಳಿಗೆ ಆಶ್ರಯ ನೀಡಿದ್ದರು. ಸಿಧು ಅವರನ್ನು ಆರೋಪಿ ಅಂಕಿತ್ ಸಿರ್ಸಾ ಸಮೀಪದಿಂದ ಶೂಟ್ ಮಾಡಿದರು. ಕಾರಿನಲ್ಲಿ ಪ್ರಿಯವ್ರತ್ ಫೌಜಿ ಜೊತೆಗಿದ್ದರು. ಆರೋಪಿಯ ಕಾರು ಮೂಸ್ ವಾಲಾ ಅವರ ವಾಹನವನ್ನು ಅಡ್ಡಗಟ್ಟಿ ದಾರಿ ತಪ್ಪಿಸಿತು. ಮೂಸ್ ವಾಲಾಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು.