ಕಾಳಿ ಟೀಕೆ ವಿವಾದ: ಮಹುವಾ ಮೊಯಿತ್ರಾ ವಿರುದ್ಧ ದೂರು; ಟಿಎಂಸಿ ಟ್ವಿಟ್ಟರ್ ಖಾತೆ ಫಾಲೊ ಮಾಡುವುದನ್ನು ನಿಲ್ಲಿಸಿದ ಸಂಸದೆ!

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಕಾಳಿ ದೇವಿಯ ಬಗ್ಗೆ ಮಾಡಿದ ಕಾಮೆಂಟ್ ವಿವಾದದ ನಂತರ ತಮ್ಮ ಪಕ್ಷದ ಅಧಿಕೃತ ಖಾತೆ ಅನ್ನು ಅನುಸರಿಸುವುದನ್ನು ನಿಲ್ಲಿಸಿದ್ದಾರೆ.
ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಕಾಳಿ ದೇವಿಯ ಬಗ್ಗೆ ಮಾಡಿದ ಕಾಮೆಂಟ್ ವಿವಾದದ ನಂತರ ತಮ್ಮ ಪಕ್ಷದ ಅಧಿಕೃತ ಖಾತೆ ಅನ್ನು ಅನುಸರಿಸುವುದನ್ನು ನಿಲ್ಲಿಸಿದ್ದಾರೆ.

ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಸಂಸದೆ ಮಹುವಾ ಮೊಯಿತ್ರಾ ಕಾಳಿ ದೇವಿ ನನಗೆ ಮಾಂಸ ತಿನ್ನುವ ಮತ್ತು ಮದ್ಯ ಸೇವಿಸುವ ದೇವತೆ. ನಿಮ್ಮ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ. ಕೆಲವು ಸ್ಥಳಗಳಲ್ಲಿ ವಿಸ್ಕಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ ಮತ್ತು ಕೆಲವು ಸ್ಥಳಗಳಲ್ಲಿ ಅದು ಧರ್ಮನಿಂದೆಯಾಗಿರುತ್ತದೆ ಎಂದು ಮೊಯಿತ್ರಾ ಹೇಳಿದ್ದರು.

ಟ್ವೀಟ್ ನಲ್ಲಿ ತೃಣಮೂಲ ಕಾಂಗ್ರೆಸ್, ಮಹುವಾ ಮೊಯಿತ್ರಾ ಅವರ ಹೇಳಿಕೆ ಅವರೇ ಹೇಳಿದ ಮಾತುಗಳು. ಇವುಗಳನ್ನು ಪಕ್ಷವು ಅನುಮೋದಿಸಿಲ್ಲ ಎಂದು ಹೇಳಿದೆ. ಕಾಳಿ ಸಾಕ್ಷ್ಯಚಿತ್ರಕ್ಕೆ ಮೊಯಿತ್ರಾ ಬೆಂಬಲ ಎಂಬ ರೀತಿಯಲ್ಲಿ ನಾನು ಆಡಿದ ಮಾತುಗಳನ್ನು ಟ್ರೋಲ್ ಮಾಡಲಾಯಿತು ಎಂದು ಮಹುವಾ ಮೊಯಿತ್ರಾ ಹೇಳಿದರು.

ನೀವು ಭೂತಾನ್ ಅಥವಾ ಸಿಕ್ಕಿಂಗೆ ಹೋದರೆ, ಉದಾಹರಣೆಗೆ, ಅವರು ಪೂಜೆ ಮಾಡುವಾಗ, ಅವರು ತಮ್ಮ ದೇವರಿಗೆ ವಿಸ್ಕಿಯನ್ನು ನೀಡುತ್ತಾರೆ. ಈಗ ನೀವು ಉತ್ತರ ಪ್ರದೇಶಕ್ಕೆ ಹೋಗಿ ನಿಮ್ಮ ದೇವರಿಗೆ ವಿಸ್ಕಿಯನ್ನು ಪ್ರಸಾದವಾಗಿ ಕೊಡುತ್ತೀರಿ ಎಂದು ಹೇಳಿದರೆ ಅದು ಧರ್ಮನಿಂದನೆ ಎಂದು ಉತ್ತರಪ್ರದೇಶದವರು ಹೇಳುತ್ತಾರೆ ಎಂದು ಮೊಯಿತ್ರಾ ಹೇಳಿದರು.

ನನಗೆ, ಕಾಳಿ ದೇವಿಯು ಮಾಂಸ ತಿನ್ನುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆ. ಮತ್ತು ನೀವು ತಾರಾಪೀಠಕ್ಕೆ (ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಪ್ರಮುಖ ಶಕ್ತಿ ಪೀಠ) ಹೋದರೆ, ನೀವು ಸಾಧುಗಳು ಧೂಮಪಾನ ಮಾಡುವುದನ್ನು ನೋಡುತ್ತೀರಿ. ಅದು ಕಾಳಿ ಜನರ ಆರಾಧನೆಯ ಆವೃತ್ತಿಯಾಗಿದೆ. ಹಿಂದೂ ಧರ್ಮದಲ್ಲಿ ಕಾಳಿ ಆರಾಧಕರಾಗಿದ್ದರೆ, ಕಾಳಿಯನ್ನು ಆ ರೀತಿಯಲ್ಲಿ ಕಲ್ಪಿಸಿಕೊಳ್ಳುವ ಹಕ್ಕಿದೆ; ಅದು ನನ್ನ ಸ್ವಾತಂತ್ರ್ಯ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com