ಮೇಘಸ್ಪೋಟವಾದ ಹತ್ತೇ ನಿಮಿಷದಲ್ಲಿ ಪ್ರವಾಹದ ನೀರು ನುಗ್ಗಿತು: ಅಮರನಾಥ ಯಾತ್ರಿಕರ ಕರಾಳ ಅನುಭವ

ಮೇಘಸ್ಫೋಟಕ್ಕೆ ಸಿಲುಕಿದ ಅಮರನಾಥ ಪವಿತ್ರ ಗುಹೆಯಿಂದ ಸೋನಾಮಾರ್ಗ್‌ನ ಬಾಲ್ಟಾಲ್ ಬೇಸ್ ಕ್ಯಾಂಪ್ ತಲುಪಿದ ರಕ್ಷಿಸಲ್ಪಟ್ಟ ಯಾತ್ರಾರ್ಥಿಗಳು ತಮ್ಮ ಘೋರ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಅಮರನಾಥ ಗುಹೆ ಬಳಿ ಮೇಘಸ್ಫೋಟ
ಅಮರನಾಥ ಗುಹೆ ಬಳಿ ಮೇಘಸ್ಫೋಟ

ಶ್ರೀನಗರ: ಮೇಘಸ್ಫೋಟಕ್ಕೆ ಸಿಲುಕಿದ ಅಮರನಾಥ ಪವಿತ್ರ ಗುಹೆಯಿಂದ ಸೋನಾ ಮಾರ್ಗ್‌ನ ಬಾಲ್ಟಾಲ್ ಬೇಸ್ ಕ್ಯಾಂಪ್ ತಲುಪಿದ ರಕ್ಷಿಸಲ್ಪಟ್ಟ ಯಾತ್ರಾರ್ಥಿಗಳು ತಮ್ಮ ಘೋರ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದ ಹರ್ದೋಯ್‌ನ ಯಾತ್ರಾರ್ಥಿ ದೀಪಕ್ ಚೌಹಾಣ್ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದು, "ಅಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸಿದೆ, ಆದರೆ ಸೇನೆಯು ಸಾಕಷ್ಟು ಬೆಂಬಲ ನೀಡಿತು. ಪ್ರವಾಹದ ಕಾರಣದಿಂದಾಗಿ ಅನೇಕ ಪೆಂಡಾಲ್‌ಗಳು ಕೊಚ್ಚಿಹೋಗಿವೆ ಎಂದು ಹೇಳಿದ್ದಾರೆ.

ಇನ್ನು ಮಹಾರಾಷ್ಟ್ರದ ಯಾತ್ರಿ ಸುಮಿತ್, "ಮೇಘಸ್ಫೋಟ ಸಂಭವಿಸಿದ ಹತ್ತೇ ನಿಮಿಷದಲ್ಲಿ ಪ್ರವಾಹ ನೀರು ನುಗ್ಗಿತು. ನೀರಿನೊಂದಿಗೆ ದೊಡ್ಡ ದೊಡ್ಡ ಗಾತ್ರದ ಬಂಡೆಗಲ್ಲುಗಳು ಕೂಡ ನೀರಿನೊಂದಿಗೆ ಕ್ಯಾಂಪ್ ನತ್ತ ನುಗ್ಗಿತು. ನಾವು ಮೇಘಸ್ಫೋಟದ ಸ್ಥಳದಿಂದ ಎರಡು ಕಿಲೋಮೀಟರ್ ದೂರದಲ್ಲಿದ್ದೆವು ಎಂದು ಹೇಳಿದ್ದಾರೆ.

ಮತ್ತೊಬ್ಬ ಯಾತ್ರಿಕರು ಮಾತನಾಡಿ, "ಮೇಘಸ್ಫೋಟ ಸಂಭವಿಸಿದಾಗ ನಮಗೆ ನಂಬಲಾಗಲಿಲ್ಲ. ಸ್ವಲ್ಪ ಸಮಯದ ನಂತರ ನಾವು ಸುತ್ತಮುತ್ತಲ ಪ್ರದೇಶದಲ್ಲಿ ಅಪಾರ ಪ್ರಮಾಣದ ನೀರನ್ನು ನೋಡಿದ್ದೇವೆ. ನಾವು ಏಳೆಂಟು ಜನರ ಗುಂಪು, ಭೋಲೆನಾಥನ ಕೃಪೆಯಿಂದ ಪಾರಾಗಿದ್ದೇವೆ. ಆದರೆ, ನಾವು ಜನರು ಮತ್ತು ಟೆಂಟ್ ಗಳು ನೀರಿನಿಂದ ಕೊಚ್ಚಿಕೊಂಡು ಹೋಗುವುದನ್ನು ನಾವು ನೋಡಿದ್ದರಿಂದ ಎಲ್ಲರಿಗೂ ಘೋರ ಅನುಭವವಾಯಿತು ಎಂದು ಹೇಳಿದ್ದಾರೆ.

"ಮೇಘಸ್ಫೋಟದ 10 ನಿಮಿಷಗಳಲ್ಲಿ, ಎಂಟು ಸಾವುನೋವುಗಳು ವರದಿಯಾಗಿದೆ. ನೀರು ಅದರೊಂದಿಗೆ ಹೆಚ್ಚಿನ ಸಂಖ್ಯೆಯ ಕಲ್ಲುಗಳನ್ನು ಹೊತ್ತೊಯ್ದಿದೆ. ಸುಮಾರು 15,000 ಯಾತ್ರಿಕರು ತೀರ್ಥಯಾತ್ರೆಗೆ ಬಂದಿದ್ದರು. ಭಾರೀ ಮಳೆಯ ನಡುವೆಯೂ ಯಾತ್ರಾರ್ಥಿಗಳು ಬರುತ್ತಲೇ ಇದ್ದರು. ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಗಳು ಇಂದು ಮುಂಜಾನೆ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಶುಕ್ರವಾರ, ಅಮರನಾಥದ ಪವಿತ್ರ ದೇಗುಲದ ಸಮೀಪವಿರುವ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿ 13 ಜನರು ಸಾವನ್ನಪ್ಪಿದ್ದಾರೆ ಮತ್ತು 48 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಗಂದರ್ಬಲ್ ಮುಖ್ಯ ವೈದ್ಯಾಧಿಕಾರಿ ಡಾ. ಎ ಶಾ ಹೇಳಿದ್ದಾರೆ.

ಈಗಿನಂತೆ, ಗಾಯಗೊಂಡ ಎಲ್ಲಾ ರೋಗಿಗಳನ್ನು ಎಲ್ಲಾ ಮೂರು ಮೂಲ ಆಸ್ಪತ್ರೆಗಳಲ್ಲಿ ನೋಡಿಕೊಳ್ಳಲಾಗುತ್ತಿದೆ. ಮೇಲಿನ ಪವಿತ್ರ ಗುಹೆ, ಕೆಳಗಿನ ಪವಿತ್ರ ಗುಹೆ, ಪಂಜತಾರ್ನಿ ಮತ್ತು ಪವಿತ್ರ ಗುಹೆಗೆ ಹೋಗುವ ಮಾರ್ಗದಲ್ಲಿ ಇತರ ಹತ್ತಿರದ ಸೌಲಭ್ಯಗಳನ್ನು ಈ ನಿಲ್ದಾಣಗಳಲ್ಲಿ ನಿಯೋಜಿಸಲಾದ ಆರೋಗ್ಯ ಕಾರ್ಯಕರ್ತರು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಅಧಿಕಾರಿಗಳ ಪ್ರಕಾರ, ಕೆಳಗಿನ ಪವಿತ್ರ ಗುಹೆಯಲ್ಲಿ (ಅಮರನಾಥ) ಸಂಜೆ 5:30 ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com