ಎಐಎಡಿಎಂಕೆ ಜಿಸಿ ಮಹತ್ವದ ಸಭೆ: ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಇ ಪಳನಿಸ್ವಾಮಿ ನೇಮಕ, ಹಲವು ನಿರ್ಣಯ ಅಂಗೀಕಾರ
ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಸಾಮಾನ್ಯ ಮಂಡಳಿ ಸಭೆಯಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನಲ್ಲಿ ಇನ್ನು ಮುಂದೆ ಉಭಯ ನಾಯಕತ್ವ ವಿಧಾನವನ್ನು ರದ್ದುಗೊಳಿಸಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
Published: 11th July 2022 10:45 AM | Last Updated: 11th July 2022 01:32 PM | A+A A-

ಇ ಪಳನಿಸ್ವಾಮಿ
ಚೆನ್ನೈ: ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಸಾಮಾನ್ಯ ಮಂಡಳಿ (General council meeting) ಸಭೆಯಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನಲ್ಲಿ (AIADMK) ಇನ್ನು ಮುಂದೆ ಉಭಯ ನಾಯಕತ್ವ ವಿಧಾನವನ್ನು ರದ್ದುಗೊಳಿಸಿ ಎಡಪ್ಪಾಡಿ ಕೆ ಪಳನಿಸ್ವಾಮಿ (Edappadi Palaniswamy) ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಪಕ್ಷದ ಪ್ರಾಥಮಿಕ ಸದಸ್ಯರಿಂದ ಹುದ್ದೆಗೆ ವ್ಯಕ್ತಿಯನ್ನು ಆಯ್ಕೆ ಮಾಡುವುದನ್ನು ಇಂದು ನಡೆದ ಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಇನನು ನಾಲ್ಕು ತಿಂಗಳೊಳಗೆ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುವವರು 10 ವರ್ಷಗಳ ಕಾಲ ನಿರಂತರವಾಗಿ ಪಕ್ಷದ ಸದಸ್ಯರಾಗಿರಬೇಕು ಎಂದು ಪಕ್ಷದ ಶಾಸಕ ಆರ್.ಬಿ.ಉದಯಕುಮಾರ್ ಹೇಳಿದ್ದಾರೆ. ಈ ಮಧ್ಯೆ, ರಾಜ್ಯಾದ್ಯಂತ ಪಕ್ಷದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳ ಆಯ್ಕೆಯನ್ನು ಸಾಂಸ್ಥಿಕ ಚುನಾವಣೆ ಮೂಲಕ ಅಂಗೀಕರಿಸುವ ನಿರ್ಣಯವನ್ನು ಸಭೆಯ ಮುಂದೆ ಶಾಸಕ ಆರ್ ಬಿ ಉದಯ್ ಕುಮಾರ್ ಪ್ರಸ್ತಾಪಿಸಿದರು.
ರಾಜಕೀಯ ಪಕ್ಷವೊಂದರ ಜಗಳದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಎಐಎಡಿಎಂಕೆ ನಾಯಕ ಮತ್ತು ಮಾಜಿ ಸಂಯೋಜಕ ಓ ಪನ್ನೀರಸೆಲ್ವಂ (OPS) ಸಾಮಾನ್ಯ ಮಂಡಳಿ ಸಭೆಯ ನಿರ್ವಹಣೆಗೆ ತಡೆ ನೀಡುವಂತೆ ಮಾಡಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಇಂದು ಸೋಮವಾರ ಬೆಳಗ್ಗೆ ತಿರಸ್ಕರಿಸಿದೆ.
Chennai, Tamil Nadu | AIADMK General Council Meeting presided by E Palaniswami underway at party office in Vanagaram; 16 resolutions are expected to be passed here pic.twitter.com/mE8YKYOlj5
— ANI (@ANI) July 11, 2022
ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ಇಂದು ಬೆಳಗ್ಗೆ ತೀರ್ಪು ನೀಡಿದ್ದು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಸರ್ವೋಚ್ಚ ನಿರ್ಧಾರ ತೆಗೆದುಕೊಳ್ಳುವ ಜಿಸಿ ಸಭೆಯನ್ನು ನಡೆಸಲು ಪಳನಿಸ್ವಾಮಿ ಬಣಕ್ಕೆ ಅನುಮತಿ ನೀಡಿದೆ.
ಇದನ್ನೂ ಓದಿ: ಪಳನಿಸ್ವಾಮಿಗೆ ಜಯ, ಪನ್ನೀರ್ ಸೆಲ್ವಂಗೆ ಹಿನ್ನಡೆ: ಎಐಎಡಿಎಂಕೆ ಮಹತ್ವದ ಸಭೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್
2016 ರಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ, ಪಕ್ಷವು ಪಳನಿಸ್ವಾಮಿ(EPS) ಸಹ ಸಂಯೋಜಕರಾಗಿ ಮತ್ತು ಪನ್ನೀರ್ ಸೆಲ್ವಂ O Pannerselvam(OPS) ಸಂಯೋಜಕರಾಗಿ ಉಭಯ ನಾಯಕತ್ವದ ಸೂತ್ರವನ್ನು ಅನುಸರಿಸುತ್ತಿದೆ. ಆದರೆ ಇದು ಉಭಯ ನಾಯಕರ ಮಧ್ಯೆ ಅಧಿಕಾರಕ್ಕಾಗಿ ಕಿತ್ತಾಟ. ಇಬ್ಬರ ಬೆಂಬಲಿಗರ ಮಧ್ಯೆ ಘರ್ಷಣಕ್ಕೆ ಕಾರಣವಾಗಿತ್ತು. ಈ ವರ್ಷ ಜೂನ್ 14 ರಂದು ನಡೆದ ಜಿಲ್ಲಾ ಕಾರ್ಯದರ್ಶಿ ಸಭೆಯಿಂದ ಪಕ್ಷದಲ್ಲಿ ಒಬ್ಬನೇ ನಾಯಕನ ಕೂಗು ಜೋರಾಗಿತ್ತು.
ಭಾರೀ ಪ್ರತಿಭಟನೆ: ಈ ಮಧ್ಯೆ, ಇಂದು ಎಐಎಡಿಎಂಕೆ ಕಾರ್ಯಕರ್ತರ ಎರಡು ಗುಂಪುಗಳು ಇಲ್ಲಿನ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಘರ್ಷಣೆ ನಡೆಸಿದ್ದಾರೆ. ಇಬ್ಬರು ನಾಯಕರ ಬೆಂಬಲಿಗರು ಎಐಎಡಿಎಂಕೆ ಧ್ವಜಗಳನ್ನು ಹೊತ್ತು ಎರಡು ಗುಂಪುಗಳ ಮಧ್ಯೆ ಪರಸ್ಪರ ಘರ್ಷಣೆ ನಡೆಸಿದರು. ಟಿವಿ ದೃಶ್ಯಗಳಲ್ಲಿ ಕೆಲವು ವ್ಯಕ್ತಿಗಳು ಪರಸ್ಪರ ಕಲ್ಲು ತೂರಾಟ ನಡೆಸುತ್ತಿರುವುದನ್ನು ಮತ್ತು ಕೆಲವು ವಾಹನಗಳು ಹಾನಿಗೀಡಾಗಿರುವುದನ್ನು ಕಾಣಬಹುದು. ಕೆಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.