ಗೋವಾ: ವಿಪಕ್ಷ ಕಾಂಗ್ರೆಸ್ ನ 5 ಶಾಸಕರು ಅಜ್ಞಾತ; ಷಡ್ಯಂತ್ರದ ಆರೋಪದಡಿ ವಿಪಕ್ಷ ನಾಯಕ ಮೈಕೆಲ್ ಲೋಬೋ ವಜಾ

ಗೋವಾದಲ್ಲಿ ವಿಪಕ್ಷ ಕಾಂಗ್ರೆಸ್ ಗೆ ಹೊಸ ತಲೆನೋವು ಪ್ರಾರಂಭವಾಗಿದ್ದು, ತನ್ನ 11 ಶಾಸಕರು ಸಂಪರ್ಕಕ್ಕೆ ಸಿಗದೇ ಅಜ್ಞಾತರಾಗಿದ್ದಾರೆ ಎಂದು ಸ್ವತಃ ಕಾಂಗ್ರೆಸ್ ಪಕ್ಷ ಹೇಳಿದೆ.
ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ ಅವರಿಂದ ಸುದ್ದಿಗೋಷ್ಠಿ
ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ ಅವರಿಂದ ಸುದ್ದಿಗೋಷ್ಠಿ

ಪಣಜಿ: ಗೋವಾದಲ್ಲಿ ವಿಪಕ್ಷ ಕಾಂಗ್ರೆಸ್ ಗೆ ಹೊಸ ತಲೆನೋವು ಪ್ರಾರಂಭವಾಗಿದ್ದು, ತನ್ನ 11 ಶಾಸಕರು ಸಂಪರ್ಕಕ್ಕೆ ಸಿಗದೇ ಅಜ್ಞಾತರಾಗಿದ್ದಾರೆ ಎಂದು ಸ್ವತಃ ಕಾಂಗ್ರೆಸ್ ಪಕ್ಷ ಹೇಳಿದೆ.

ತನ್ನ ಇಬ್ಬರು ಶಾಸಕರು- ಮೈಕೆಲ್ ಲೋಬೋ ( ವಿಪಕ್ಷ ನಾಯಕ) ಹಾಗೂ ದಿಗಂಬರ್ ಕಾಮತ್ (ಮಾಜಿ ಸಿಎಂ) ಇಬ್ಬರೂ ಬಿಜೆಪಿ ಜೊತೆಗೂಡಿ ಪಕ್ಷದ ಶಾಸಕರನ್ನು ಇಬ್ಭಾಗ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಪಕ್ಷ ಲೋಬೋ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ವಜಾಗೊಳಿಸಿದೆ.

ಈ ಮಾಹಿತಿ ಹಾಗೂ ವಿಪಕ್ಷ ನಾಯಕನನ್ನು ವಜಾಗೊಳಿಸುತ್ತಿರುವ ಪಕ್ಷದ ನಿರ್ಧಾರವನ್ನು ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಪ್ರಕಟಿಸಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್ ನ ಕೆಲವು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ, ಊಹಾಪೋಹಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. 3 ವರ್ಷಗಳ ಹಿಂದೆ ಇದೇ ದಿನದಂದು ಕಾಂಗ್ರೆಸ್ ನ 10 ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

"ಕಾಂಗ್ರೆಸ್ ನಲ್ಲಿ ಒಡಕು ಮೂಡಿಸುತ್ತಿದ್ದ ಇಬ್ಬರೂ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com