ಲಖನೌ: ಮಗ ಸಾಕಿದ ಪಿಟ್‌ಬುಲ್ ನಾಯಿಯಿಂದಲೇ ತಾಯಿ ಸಾವು!

ತಾಯಿಯೊಬ್ಬರು ಮಗ ಸಾಕಿದ್ದ ಮುದ್ದಿನ ಪಿಟ್‌ಬುಲ್ ನಾಯಿಯಿಂದಲೇ ಸಾವನ್ನಪ್ಪಿರುವ ದುರಾದೃಷ್ಟಕರ ಘಟನೆ ಉತ್ತರ ಪ್ರದೇಶದ ಲಖನೌದ ಕೈಸರ್‌ಬಾಗ್ ಪ್ರದೇಶದ ಬಂಗಾಳಿ ಟೋಲಾ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ತಾಯಿಯೊಬ್ಬರು ಮಗ ಸಾಕಿದ್ದ ಮುದ್ದಿನ ಪಿಟ್‌ಬುಲ್ ನಾಯಿಯಿಂದಲೇ ಸಾವನ್ನಪ್ಪಿರುವ ದುರಾದೃಷ್ಟಕರ ಘಟನೆ ಉತ್ತರ ಪ್ರದೇಶದ ಲಖನೌದ ಕೈಸರ್‌ಬಾಗ್ ಪ್ರದೇಶದ ಬಂಗಾಳಿ ಟೋಲಾ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದೆ. 82 ವರ್ಷದ ಸುಶೀಲಾ ತ್ರಿಪಾಠಿ ನಿವೃತ್ತ ಶಿಕ್ಷಕಿ. ಆಕೆಯ ಮಗ ಅಮಿತ್, ಜಿಮ್ ತರಬೇತುದಾರ. ಈತ ಪಿಟ್‌ಬುಲ್ ಮತ್ತು ಲ್ಯಾಬ್ರಡಾರ್ ಎಂಬ ಎರಡು ನಾಯಿಗಳನ್ನು ಸಾಕಿದ್ದರು.

ಸುಶೀಲಾ ತ್ರಿಪಾಠಿ ಮೇಲೆ ದಾಳಿ ಮಾಡಿದ ಬ್ರೌನಿ ಎಂಬ ಪಿಟ್‌ಬುಲ್ ನಾಯಿಯನ್ನು ಮೂರು ವರ್ಷಗಳ ಹಿಂದೆ ಮನೆಗೆ ತರಲಾಗಿತ್ತು. ಸುಶೀಲಾ ತ್ರಿಪಾಠಿ ಮನೆಯಲ್ಲಿ ಒಬ್ಬರೇ ಇದ್ದಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ನಾಯಿಯೇ ಸುಶೀಲಾ ಅವರನ್ನು ಕಚ್ಚಿ ಕೊಂದಿರುವ ಘಟನೆ ನಡೆದಿದೆ.

ಮನೆಗೆ ಬಂದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಮಗ ಅಮಿತ್ ಆಕೆಯನ್ನು ಬಲರಾಂಪುರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಹೆಚ್ಚಿನ ರಕ್ತಸ್ರಾವದಿಂದಾಗಿ ಅವರು ಅಸುನೀಗಿದರು. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸುಶೀಲಾ ಅವರ ದೇಹದಲ್ಲಿ ಕುತ್ತಿಗೆಯಿಂದ ಹೊಟ್ಟೆಯವರೆಗೆ ಒಟ್ಟು 12 ತೀವ್ರ ಗಾಯಗಳು ಪತ್ತೆಯಾಗಿವೆ.

ನೆರೆಹೊರೆಯವರ ಪ್ರಕಾರ, ಬೆಳಗ್ಗೆ 6 ಗಂಟೆ ಸುಮಾರಿಗೆ ನಾಯಿಗಳು ಬೊಗಳುವುದು ಮತ್ತು ಸುಶೀಲಾ ಅವರು ಸಹಾಯಕ್ಕಾಗಿ ಕೂಗುವುದು ಕೇಳಿತು. ನಾವು ಅವರ ಮನೆಗೆ ಧಾವಿಸಿದೆವು. ಆದರೆ ಅದು ಒಳಗಿನಿಂದ ಬೀಗ ಹಾಕಲಾಗಿತ್ತು. ಮಹಿಳೆಯ ಮಗ ಮನೆಗೆ ಬಂದು ತೆರೆದು ನೋಡಿದಾಗ ತಾಯಿ ತೀವ್ರವಾಗಿ ಗಾಯಗೊಂಡಿರುವುದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com