ಉದ್ಘಾಟನೆಗೆ ಸಿದ್ಧವಾಗಿರುವ 296 ಕಿ.ಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಬಗ್ಗೆ ಎಷ್ಟು ಗೊತ್ತು?

ಉತ್ತರ ಪ್ರದೇಶದ ಬುಂದೇಲ್‌ಖಂಡ್ ಎಕ್ಸ್ ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಲಿದ್ದಾರೆ. ಸುಮಾರು 14,850 ಕೋಟಿ ರೂ. ವೆಚ್ಚದಲ್ಲಿ 296 ಕಿ.ಮೀ ಉದ್ದದ ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ.
ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ
ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ

ನವದೆಹಲಿ: ಉತ್ತರ ಪ್ರದೇಶದ ಬುಂದೇಲ್‌ಖಂಡ್ ಎಕ್ಸ್ ಪ್ರೆಸ್‌ವೇ ಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಲಿದ್ದಾರೆ. ಸುಮಾರು 14,850 ಕೋಟಿ ರೂ. ವೆಚ್ಚದಲ್ಲಿ 296 ಕಿ.ಮೀ ಉದ್ದದ ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ.

ಬುಂದೇಲ್‌ಖಂಡ್ ಎಕ್ಸ್ ಪ್ರೆಸ್‌ವೇಗೆ ಸಂಬಂಧಿಸಿದ ಪ್ರಮುಖ 5 ಅಂಶಗಳು ಇಲ್ಲಿವೆ

  • ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 2020 ರಲ್ಲಿ ನಾಲ್ಕು-ಪಥದ ಎಕ್ಸ್ ಪ್ರೆಸ್ ವೇಗೆ ಶಂಕುಸ್ಥಾಪನೆ ಮಾಡಿದರು. ಉತ್ತರ ಪ್ರದೇಶ ಎಕ್ಸ್ ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯುಪಿಇಐಡಿಎ) ಬೆಂಬಲದೊಂದಿಗೆ 28 ​​ತಿಂಗಳೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
  • ಎಕ್ಸ್ ಪ್ರೆಸ್‌ವೇಯು ಉತ್ತರ ಪ್ರದೇಶದ ಚಿತ್ರಕೂಟ್‌ನ ಗೊಂಡಾ ಗ್ರಾಮದಲ್ಲಿ NH-35 ನಿಂದ ರಾಜ್ಯದ ಇಟಾವಾ ಜಿಲ್ಲೆಯವರೆಗೆ ವಿಸ್ತರಿಸಿದೆ. ಅಲ್ಲಿ ಇದು 300 ಕಿಮೀ ಉದ್ದದ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್‌ವೇಯೊಂದಿಗೆ ವಿಲೀನಗೊಳ್ಳುತ್ತದೆ.
  • ಎಕ್ಸ್ ಪ್ರೆಸ್‌ವೇ ಪ್ರಸ್ತುತ ನಾಲ್ಕು ಲೇನ್‌ಗಳನ್ನು ಹೊಂದಿದೆ ಆದರೆ ಇದನ್ನು ಆರು-ಪಥದ ಎಕ್ಸ್ ಪ್ರೆಸ್‌ವೇಗೆ ವಿಸ್ತರಿಸಬಹುದು. ಇದು ಉತ್ತರ ಪ್ರದೇಶದ ಚಿತ್ರಕೂಟ, ಬಂದಾ, ಮಹೋಬಾ, ಹಮೀರ್‌ಪುರ, ಜಲೌನ್, ಔರೈಯಾ ಮತ್ತು ಇಟಾವಾ ಏಳು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ
  • 2020 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಂದೇಲ್‌ಖಂಡ್ ಎಕ್ಸ್ ಪ್ರೆಸ್‌ವೇ ಬುಂದೇಲ್‌ಖಂಡದಲ್ಲಿ ನಿರ್ಮಿಸಲಾಗುತ್ತಿರುವ ರಕ್ಷಣಾ ಕಾರಿಡಾರ್‌ಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.
  • ಬುಂದೇಲ್‌ಖಂಡ್ ಎಕ್ಸ್ ಪ್ರೆಸ್‌ವೇ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್‌ವೇ ಮತ್ತು ಯಮುನಾ ಎಕ್ಸ್ ಪ್ರೆಸ್‌ವೇ ಮೂಲಕ ದೆಹಲಿಗೆ ಸಂಪರ್ಕಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com