'ಸುಪ್ರೀಂ' ಮೆಟ್ಟಿಲೇರಿದ ಮೊಹಮ್ಮದ್ ಜುಬೈರ್; ಅವರ ಆಕ್ಷೇಪಾರ್ಹ ಟ್ವೀಟ್ ನಿಂದ ಮನನೊಂದವರೆಷ್ಟು?- ದೆಹಲಿ ಕೋರ್ಟ್ ಪ್ರಶ್ನೆ

ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ತಮ್ಮ ವಿರುದ್ಧ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ದಾಖಲಾಗಿರುವ 6 ಎಫ್ಐಆರ್ ಗಳನ್ನು ರದ್ದುಗೊಳಿಸಲು ಮನವಿ ಮಾಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮೊಹಮ್ಮದ್ ಜುಬೈರ್
ಮೊಹಮ್ಮದ್ ಜುಬೈರ್

ನವದೆಹಲಿ: ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ತಮ್ಮ ವಿರುದ್ಧ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ದಾಖಲಾಗಿರುವ 6 ಎಫ್ಐಆರ್ ಗಳನ್ನು ರದ್ದುಗೊಳಿಸಲು ಮನವಿ ಮಾಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿ ಜುಬೈರ್ ವಿರುದ್ಧ ಪ್ರಕರಣ ದಾಖಲಾಗಿದ್ದು ಎಲ್ಲಾ ಪ್ರಕರಣಗಳಲ್ಲೂ ಮಧ್ಯಂತರ ಜಾಮೀನು ನೀಡಲು ಜುಬೈರ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್ ನ ಕೋರ್ಟ್ ಜುಬೈರ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು ಈ ಬೆನ್ನಲ್ಲೇ ಆತ ಸುಪ್ರೀಂ ಮೆಟ್ಟಿಲೇರಿದ್ದಾರೆ. ಇದೇ ವೇಳೆ ಆರೋಪಿ ತನಗೆ ಜಾಮೀನು ನಿರಾಕರಿಸಿರುವ ಮ್ಯಾಜಿಸ್ಟೀರಿಯಲ್ ಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದಾರೆ.

ಜುಬೈರ್ ಜನರನ್ನು ಪ್ರಚೋದಿಸಿ ಅವರ ನಡುವೆ ದುರುದ್ದೇಶ ಮೂಡುವಂತೆ ಮಾಡುವ ಉದ್ದೇಶ ಹೊಂದಿದ್ದ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದು, ದೆಹಲಿ ಪೊಲೀಸರು ಟ್ವೀಟ್ ನಿಂದ ಮನನೊಂದವರ ಹೇಳಿಕೆಗಳನ್ನು ಪಡೆದಿದ್ದಾರಾ? ಎಂದು ವಾದ ಪ್ರತಿವಾದಗಳ ವೇಳೆ ಕೋರ್ಟ್ ಪ್ರಶ್ನಿಸಿದೆ.

ಎಷ್ಟು ಮಂದಿ ಜುಬೈರ್ ಟ್ವೀಟ್ ನಿಂದ ಮನನೊಂದಿದ್ದಾರೆ. ಈ ಪೈಕಿ ಎಷ್ಟು ಮಂದಿಯಿಂದ ಹೇಳಿಕೆಗಳನ್ನು ಪಡೆಯಲಾಗಿದೆ? ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಾಸಿಕ್ಯೂಟರ್, ಮುಂದಿನ ಹಂತಗಳಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದಷ್ಟೇ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com