222 ಪ್ರಯಾಣಿಕರಿದ್ದ ಏರ್ ಅರೇಬಿಯಾ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ: ಎಲ್ಲರೂ ಸುರಕ್ಷಿತ
ಶಾರ್ಜಾದಿಂದ ಕೊಚ್ಚಿಗೆ ಸಂಚರಿಸುವ, 222 ಪ್ರಯಾಣಿಕರಿದ್ದ ಏರ್ ಅರೇಬಿಯಾ ವಿಮಾನ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
Published: 16th July 2022 03:12 AM | Last Updated: 16th July 2022 03:12 AM | A+A A-

ಕೊಚ್ಚಿ ವಿಮಾನ ನಿಲ್ದಾಣ
ಕೊಚ್ಚಿ: ಶಾರ್ಜಾದಿಂದ ಕೊಚ್ಚಿಗೆ ಸಂಚರಿಸುವ, 222 ಪ್ರಯಾಣಿಕರಿದ್ದ ಏರ್ ಅರೇಬಿಯಾ ವಿಮಾನ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಹೈಡ್ರಾಲಿಕ್ ವೈಫಲ್ಯದ ಕಾರಣದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ.
ವಿಮಾನ ಕೊಚ್ಚಿ ವಿಮಾನ ನಿಲ್ದಾಣದಲ್ಲಿ 7:13 ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ತುರ್ತು ಕಾರಣಗಳಿಂದಾಗಿ 6:41ಕ್ಕೆ ತುರ್ತು ಲ್ಯಾಂಡಿಂಗ್ ನ್ನು ಘೋಷಣೆ ಮಾಡಲಾಗಿತ್ತು. ಸಂಜೆ 7:29ಕ್ಕೆ ರನ್ ವೇ 9 ರಲ್ಲಿ ಜಿ9-426 ಏರ್ ಅರೇಬಿಯಾ ವಿಮಾನ ಲ್ಯಾಂಡ್ ಆಯಿತು, ಎಲ್ಲಾ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಭೂಸ್ಪರ್ಶದ ಹಿನ್ನೆಲೆಯಲ್ಲಿ ರನ್ ವೇ ಯನ್ನು ಅತ್ಯಂತ ವೇಗವಾಗಿ ತೆರವುಗೊಳಿಸಲಾಯಿತು.