'ಈ ಮಣ್ಣಿಗೋಸ್ಕರ': ಕಾಂಗ್ರೆಸ್ ಶಾಸಕನಿಂದ ಅಡ್ಡಮತದಾನ, ಬಿಜೆಪಿ ಅಭ್ಯರ್ಥಿ ದ್ರೌಪತಿ ಮುರ್ಮುಗೆ ಮತ ಚಲಾಯಿಸಿದ ಮೊಕ್ವಿಮ್

ಮಣ್ಣಿಗಾಗಿ ಏನಾದರೂ ಮಾಡುವಂತೆ ಮಾರ್ಗದರ್ಶನ ನೀಡಿದ ನನ್ನ ಮನದಾಳದ ಮಾತನ್ನು ಕೇಳಿದ್ದು ಇದು ನನ್ನ ವೈಯಕ್ತಿಕ ನಿರ್ಧಾರವಾಗಿದ್ದು ಅದಕ್ಕಾಗಿಯೇ ಆಕೆಗೆ ಮತ ಹಾಕಿದ್ದೇನೆ ಎಂದರು.
ಮೊಹಮ್ಮದ್ ಮೊಕ್ವಿಮ್
ಮೊಹಮ್ಮದ್ ಮೊಕ್ವಿಮ್

ಭುವನೇಶ್ವರ: ಒಡಿಶಾದ ಕಾಂಗ್ರೆಸ್ ಶಾಸಕ ಮೊಹಮ್ಮದ್ ಮೊಕ್ವಿಮ್ ಇಂದು ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಒಡಿಶಾದವರಾದ ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದರು. 

ಮಣ್ಣಿಗಾಗಿ ಏನಾದರೂ ಮಾಡುವಂತೆ ಮಾರ್ಗದರ್ಶನ ನೀಡಿದ ನನ್ನ ಮನದಾಳದ ಮಾತನ್ನು ಕೇಳಿದ್ದು ಇದು ನನ್ನ ವೈಯಕ್ತಿಕ ನಿರ್ಧಾರವಾಗಿದ್ದು ಅದಕ್ಕಾಗಿಯೇ ಆಕೆಗೆ ಮತ ಹಾಕಿದ್ದೇನೆ ಎಂದರು.

ಈ ಚುನಾವಣೆಗಳಲ್ಲಿ ಸಂಸದರು ಮತ್ತು ಶಾಸಕರು ಮತದಾರರಾಗಿದ್ದು ಪಕ್ಷಗಳು ಬೈಂಡಿಂಗ್ ವಿಪ್‌ಗಳನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಪಕ್ಷಾಂತರ ವಿರೋಧಿ ಕಾನೂನು ಕಾರ್ಯರೂಪಕ್ಕೆ ಬರುವುದಿಲ್ಲ.

ದ್ರೌಪತಿ ಮುರ್ಮು  ಸಂತಾಲ್ ಬುಡಕಟ್ಟಿಗೆ ಸೇರಿದವರು ಮತ್ತು ಬುಡಕಟ್ಟು ಸಮುದಾಯದಿಂದ ಮೊದಲ ರಾಷ್ಟ್ರಪತಿಯಾಗಲು ಸಿದ್ಧರಾಗಿದ್ದಾರೆ.  ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರೊಂದಿಗೆ ನೇರ ಸ್ಪರ್ಧೆಯಲ್ಲಿ ಆರಾಮವಾಗಿ ಸ್ಥಾನ ಪಡೆದಿದ್ದಾರೆ. ಅವರ ಬುಡಕಟ್ಟು ಗುರುತಿನಿಂದಾಗಿ ಹಲವಾರು ಎನ್‌ಡಿಎ-ಯೇತರ ಪಕ್ಷಗಳಿಂದ ಭಾರೀ ಬೆಂಬಲ ಪಡೆದಿದ್ದಾರೆ. ವಿಶೇಷವಾಗಿ ಬುಡಕಟ್ಟು ಅಥವಾ ಇತರ ಹಿಂದುಳಿದ ಸಮುದಾಯಗಳ ಗಮನಾರ್ಹ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಲ್ಲಿ ಬೆಂಬಲ ಸಿಕ್ಕಿದೆ.

ಜುಲೈ 21 ರಂದು ಎಣಿಕೆಯ ನಂತರ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com