ತಮಿಳುನಾಡಿನ ಕಲ್ಲಕುರಿಚಿಯಲ್ಲಿ ವಿದ್ಯಾರ್ಥಿನಿ ಸಾವು: ಶಾಲೆಯ ಕಾರ್ಯದರ್ಶಿ, ಪ್ರಾಂಶುಪಾಲ, ಇಬ್ಬರು ಶಿಕ್ಷಕರು 15 ದಿನ ಪೊಲೀಸ್ ಕಸ್ಟಡಿಗೆ

ತಮಿಳು ನಾಡಿನ ಕಲ್ಲಕುರಿಚಿಯಲ್ಲಿ ಖಾಸಗಿ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಕಾರ್ಯದರ್ಶಿ, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳನ್ನು ಮತ್ತು ಇಬ್ಬರು ಶಿಕ್ಷಕರನ್ನು 15 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. 
ಕಲ್ಲಕುರಿಚಿಯಲ್ಲಿ ವಿದ್ಯಾರ್ಥಿನಿ ಸಾವು ಹಾಗೂ ನಂತರ ನಡೆದ ಪ್ರತಿಭಟನೆಯಲ್ಲಿ ಶಾಲಾ ಬಸ್ಸು ಧ್ವಂಸ
ಕಲ್ಲಕುರಿಚಿಯಲ್ಲಿ ವಿದ್ಯಾರ್ಥಿನಿ ಸಾವು ಹಾಗೂ ನಂತರ ನಡೆದ ಪ್ರತಿಭಟನೆಯಲ್ಲಿ ಶಾಲಾ ಬಸ್ಸು ಧ್ವಂಸ

ಕಲ್ಲಕುರಿಚಿ(ತಮಿಳು ನಾಡು): ತಮಿಳು ನಾಡಿನ ಕಲ್ಲಕುರಿಚಿಯಲ್ಲಿ ಖಾಸಗಿ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಕಾರ್ಯದರ್ಶಿ, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳು ಮತ್ತು ಇಬ್ಬರು ಶಿಕ್ಷಕರನ್ನು 15 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. 

ಪ್ರೌಢಶಾಲೆ ನಿರ್ದೇಶನಾಲಯ 987 ಖಾಸಗಿ ಶಾಲೆಗಳಿಗೆ ನೊಟೀಸ್ ನೀಡಿದ್ದು ಸರ್ಕಾರದ ಸೂಚನೆಗೆ ವಿರುದ್ಧ ಶಾಲೆಗಳನ್ನು ಮುಚ್ಚುವ ಕುರಿತು ವಿವರಣೆ ಕೋರಿದ್ದಾರೆ.

ಕಲ್ಲಕುರಿಚಿಯ ಕಣಿಯಮೂರು ಶಕ್ತಿ ಖಾಸಗಿ ಶಾಲೆಯ ಮೇಲೆ ದಾಳಿಗೆ ಸಂಬಂಧಪಟ್ಟಂತೆ ಎಲ್ಲಾ ಖಾಸಗಿ ನರ್ಸರಿ, ಪ್ರೌಢಶಿಕ್ಷಣ ಮತ್ತು ಸಿಬಿಎಸ್ ಇ ಶಾಲೆಗಳನ್ನು ಮುಚ್ಚಿ ಈಗಾಗಲೇ ಪ್ರತಿಭಟನೆ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com