ಆಲ್ಟ್ ನ್ಯೂಸ್ ನ ಜುಬೇರ್ ಗೆ ಮತ್ತೊಂದು ರಿಲೀಫ್: ಸಮಸ್ಯೆ ವಿಷವರ್ತುಲದಂತಿದೆ ಎಂದ ಸುಪ್ರೀಂ ಕೋರ್ಟ್

ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಗೆ ಇಂದು ಸುಪ್ರೀಂ ಕೋರ್ಟ್‌ ಮತ್ತೊಂದು ತಾತ್ಕಾಲಿಕ ಪರಿಹಾರ ನೀಡಿದೆ.
ಮೊಹಮ್ಮದ್ ಜುಬೈರ್
ಮೊಹಮ್ಮದ್ ಜುಬೈರ್

ನವದೆಹಲಿ: ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಗೆ ಇಂದು ಸುಪ್ರೀಂ ಕೋರ್ಟ್‌ ಮತ್ತೊಂದು ತಾತ್ಕಾಲಿಕ ಪರಿಹಾರ ನೀಡಿದೆ. ಬುಧವಾರದ ಮುಂದಿನ ವಿಚಾರಣೆಯವರೆಗೂ ಜುಬೇರ್ ವಿರುದ್ಧದ ಐದು ಪ್ರಕರಣಗಳಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಉತ್ತರ ಪ್ರದೇಶ ಪೊಲೀಸರಿಗೆ ತಿಳಿಸಿದೆ. 

ರಾಜ್ಯದಲ್ಲಿ ಆರನೇ ಪ್ರಕರಣದಲ್ಲಿ ಅವರು ಈಗಾಗಲೇ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ಆದರೆ ಮತ್ತೊಂದು ಎಫ್‌ಐಆರ್‌ನಿಂದ ಅವರು ಜೈಲಿನಲ್ಲಿದ್ದಾರೆ. ಇತ್ತೀಚಿನ ಮನವಿಯಲ್ಲಿ ಅವರು ಜಾಮೀನು ಕೋರಿ  ಮತ್ತು ಎಲ್ಲಾ ಆರು ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದರು.

ಮಧ್ಯಂತರ ಜಾಮೀನನ್ನು ಪರಿಗಣಿಸಲು ಅವರ ಮನವಿಯನ್ನು ಬುಧವಾರ ಪಟ್ಟಿ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ: ಆದರೆ ಅಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಕೋರ್ಟ್ ಸೂಚಿಸಿದೆ. ಇತರ ನ್ಯಾಯಾಲಯಗಳು ಆದೇಶಗಳನ್ನು ನೀಡುವುದನ್ನು ತಡೆಯಬಾರದು ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದಾಗ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಆದರೆ ಸಮಸ್ಯೆ ವಿಷವರ್ತುಲವಂತಿದೆ. ಅವರು ಒಂದು ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆಯುತ್ತಾರೆ ಆದರೆ ಇತರ ಕೆಲವು ಪ್ರಕರಣಗಳಲ್ಲಿ ಬಂಧಿಸಲ್ಪಡುತ್ತಾರೆ ಎಂದು ಹೇಳಿದರು.

ಜಬೇರ್ ವಿರುದ್ಧದ ಪ್ರಕರಣಗಳ ತನಿಖೆಗಾಗಿ ಯುಪಿ ಪೊಲೀಸರು ಈಗಾಗಲೇ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ.

ಮೊಹಮ್ಮದ್ ಜುಬೇರ್ ಅವರು 1983 ರ ಚಲನಚಿತ್ರದ ಚಿತ್ರವನ್ನು ಹಂಚಿಕೊಂಡ ನಾಲ್ಕು ವರ್ಷಗಳ ಹಳೆಯ ಟ್ವೀಟ್‌ಗಾಗಿ ಎಫ್‌ಐಆರ್ ದಾಖಲಾಗಿದ್ದಕ್ಕಾಗಿ ಜೂನ್ 27 ರಂದು ದೆಹಲಿಯಲ್ಲಿ ಮೂಲತಃ ಬಂಧಿಸಲಾಯಿತು. ನಂತರ ಯುಪಿಯ ಸೀತಾಪುರದಲ್ಲಿ ಕೆಲವು ಹಿಂದೂ ಬಲಪಂಥೀಯ ನಾಯಕರನ್ನು 'ದ್ವೇಷವಾದಿಗಳು' ಎಂದು ಕರೆದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು. ಈ ಎರಡೂ ಪ್ರಕರಣಗಳಲ್ಲಿ ಅವರು ಜಾಮೀನು ಪಡೆದಿದ್ದಾರೆ.

ಆದರೂ, ಅವರು ಸತ್ಯ ಪರಿಶೀಲನೆಯ ಲೇಖನದ ಮೇಲೆ ಹತ್ರಾಸ್‌ನಲ್ಲಿ ದಾಖಲಾದ ಮತ್ತೊಂದು ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ. ಇಂದು ಅಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಿಗದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com