ಸಾಂದರ್ಭಿಕ ಚಿತ್ರ
ದೇಶ
ಕೋವಿಡ್-19: ದೇಶದಲ್ಲಿ 20,557 ಹೊಸ ಪ್ರಕರಣ, 40 ಮಂದಿ ಸಾವು
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 20 ಸಾವಿರದ 557 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಹಾಗೂ 40 ಮಂದಿ ಮೃತಪಟ್ಟಿದ್ದಾರೆ. ಒಂದು ದಿನದಲ್ಲಿ 18 ಸಾವಿರದ 517 ಮಂದಿ ಗುಣಮುಖರಾಗಿದ್ದಾರೆ.
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 20 ಸಾವಿರದ 557 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಹಾಗೂ 40 ಮಂದಿ ಮೃತಪಟ್ಟಿದ್ದಾರೆ. ಒಂದು ದಿನದಲ್ಲಿ 18 ಸಾವಿರದ 517 ಮಂದಿ ಗುಣಮುಖರಾಗಿದ್ದಾರೆ.
ಈ ಮೂಲಕ ಇದುವರೆಗೆ ದೇಶದಲ್ಲಿ ಕೋವಿಡ್ ನಿಂದ ಗುಣಮುಖ ಹೊಂದಿದವರ ಸಂಖ್ಯೆ 4 ಕೋಟಿಯ 31 ಲಕ್ಷದ 32 ಸಾವಿರದ 140 ಆಗಿದೆ. ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ ಇದುವರೆಗೆ 5 ಲಕ್ಷದ 25 ಸಾವಿರದ 825 ಮಂದಿ ಮೃತಪಟ್ಟಿದ್ದಾರೆ. ದಿನಂಪ್ರತಿ ಪಾಸಿಟಿವ್ ಪ್ರಮಾಣ ಶೇಕಡಾ 4.13ರಷ್ಟಿದೆ. ಸಕ್ರಿಯ ಸೋಂಕಿತರು 1 ಲಕ್ಷದ 45 ಸಾವಿರದ 654 ಆಗಿದ್ದಾರೆ.
ಕೋವಿಡ್ ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಇಲ್ಲಿಯವರೆಗೆ 200 ಕೋಟಿಯ 61 ಲಕ್ಷದ 24 ಸಾವಿರದ 684 ಡೋಸ್ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 26 ಲಕ್ಷದ 04 ಸಾವಿರದ 797 ಡೋಸ್ ಗಳನ್ನು ವಿತರಿಸಲಾಗಿದೆ. ಇದುವರೆಗೆ 87.06 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು ಕಳೆದ 24 ಗಂಟೆಗಳಲ್ಲಿ 4 ಲಕ್ಷದ 98 ಸಾವಿರದ 034 ಮಂದಿಗೆ ಪರೀಕ್ಷೆ ನಡೆಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ