ನೀರವ್ ಮೋದಿಯ 253 ಕೋಟಿ ರೂಪಾಯಿ ಮೌಲ್ಯದ ಆಭರಣ, ಬ್ಯಾಂಕ್ ಠೇವಣಿ ಜಪ್ತಿ ಮಾಡಿದ ಇಡಿ

ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ ಕಂಪನಿಗಳ 253.62 ಕೋಟಿ ರೂಪಾಯಿ ಮೌಲ್ಯದ ರತ್ನಗಳು, ಆಭರಣಗಳು ಮತ್ತು ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಲಾಗಿದೆ...
ನೀರವ್ ಮೋದಿ
ನೀರವ್ ಮೋದಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ ಕಂಪನಿಗಳ 253.62 ಕೋಟಿ ರೂಪಾಯಿ ಮೌಲ್ಯದ ರತ್ನಗಳು, ಆಭರಣಗಳು ಮತ್ತು ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ತಿಳಿಸಿದೆ.

ಜಪ್ತಿ ಮಾಡಲಾದ ಈ ಎಲ್ಲಾ ಚರ ಆಸ್ತಿಗಳು ಹಾಂಗ್ ಕಾಂಗ್‌ನಲ್ಲಿವೆ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಂಗ್ ಕಾಂಗ್‌ನಲ್ಲಿರುವ ನೀರವ್ ಮೋದಿ ಸಮೂಹದ ಕಂಪನಿಗಳ ಕೆಲವು ಆಸ್ತಿಗಳು ಖಾಸಗಿ ದಾಸ್ತಾನುಗಳಲ್ಲಿವೆ. ಅವು ರತ್ನಗಳು ಮತ್ತು ಆಭರಣಗಳ ರೂಪದಲ್ಲಿದ್ದು, ಅವುಗಳನ್ನು ಮತ್ತು ಖಾತೆಗಳಲ್ಲಿನ ಬ್ಯಾಂಕ್ ಬ್ಯಾಲೆನ್ಸ್‌ ಅನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಹೇಳಿದೆ.

50 ವರ್ಷದ ನೀರವ್ ಮೋದಿ ಪ್ರಸ್ತುತ ಯುಕೆ ಜೈಲಿನಲ್ಲಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com