ಎಸ್ ಎಸ್ ಸಿ ನೇಮಕಾತಿ ಹಗರಣ: ಟಿಎಂಸಿ ಮುಖಂಡ ಪಾರ್ಥ ಚಟರ್ಜಿ ನಿವಾಸದಲ್ಲಿ ಇಡಿ ಶೋಧ
ಶಾಲಾ ಸೇವಾ ಆಯೋಗದ (ಎಸ್ ಎಸ್ ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಹಾಗೂ ಟಿಎಂಸಿ ಮುಖಂಡ ಪಾರ್ಥ ಚಟರ್ಜಿ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ಕೈಗೊಂಡಿದೆ.
Published: 22nd July 2022 12:15 PM | Last Updated: 22nd July 2022 12:15 PM | A+A A-

ಪಾರ್ಥ ಚಟರ್ಜಿ
ಕೋಲ್ಕತ್ತಾ: ಶಾಲಾ ಸೇವಾ ಆಯೋಗದ (ಎಸ್ ಎಸ್ ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಹಾಗೂ ಟಿಎಂಸಿ ಮುಖಂಡ ಪಾರ್ಥ ಚಟರ್ಜಿ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ಕೈಗೊಂಡಿದೆ.
ಜೂನ್ 29 ರಂದು ರಾಜ್ಯ ಅನುದಾನಿತ ಶಾಲೆಗಳಿಗೆ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತು ಇಡಿ ತನಿಖೆ ಪ್ರಾರಂಭಿಸಿತ್ತು. ಫೆಡರಲ್ ತನಿಖಾ ಸಂಸ್ಥೆಯು ಎರಡು ಎಫ್ ಐಆರ್ ಗಳನ್ನು ದಾಖಲಿಸಿದೆ.
ಎಸ್ ಎಸ್ ಎಲ್ ಸಿ ಮೂಲಕ ನೇಮಕಗೊಂಡ ಶಿಕ್ಷಕರ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಪ್ರಕರಣದಲ್ಲಿ ಹಲವು ಪ್ರಭಾವಿ ವ್ಯಕ್ತಿಗಳ ಹೆಸರು ಕೇಳಿಬಂದಿದೆ.ಪಾರ್ಥ ಚಟರ್ಜಿ ಅವರು ಅನುಮೋದಿಸಿದ ಉನ್ನತ ಅಧಿಕಾರದ ಮೇಲ್ವಿಚಾರಣಾ ಸಮಿತಿಯು ಆಪಾದಿತ ಹಗರಣದ ಮೂಲ ಎಂದು ಕೋಲ್ಕತ್ತಾ ಹೈಕೋರ್ಟ್ ಈ ಹಿಂದೆ ಹೇಳಿತ್ತು.
2019ರ ಜನವರಿಯಿಂದ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಸಮಿತಿಯ ಸದಸ್ಯರು ನ್ಯಾಯಾಲಯದ ಮುಂದೆ ವ್ಯತಿರಿಕ್ತವಾದ ಹೇಳಿಕೆ ಸಲ್ಲಿಸಿದ ನಂತರ ಪೀಠವು, ರಾಜ್ಯ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದೆ.