ದೆಹಲಿ: ಕೇರಳ ನಂತರ ದೆಹಲಿಯಲ್ಲಿ ಮಂಕಿ ಪಾಕ್ಸ್ ಪತ್ತೆಯಾಗಿದೆ. ರಾಷ್ಟ್ರರಾಜಧಾನಿಗೂ ಮಂಕಿ ಪಾಕ್ಸ್ ಸೋಂಕು ಹರಡಿದ್ದು, ದೆಹಲಿಯಲ್ಲಿ ಮೊದಲ ಪ್ರಕರಣ ಪತ್ತೆಯಾಗುತ್ತಿದ್ದಂತೆ ಆತಂಕ ಹೆಚ್ಚಾಗಿದೆ.
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ದೇ ಇದ್ರೂ ಸೋಂಕು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಮಂಕಿ ಪಾಕ್ಸ್ ಪ್ರಕರಣ 4ಕ್ಕೇರಿದೆ.
ಈಗಾಗ್ಲೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿರುವ ಡಬ್ಲ್ಯೂ ಎಚ್ ಒ, ಮಂಕಿ ಪಾಕ್ಸ್ ಸೋಂಕು ವಿಚಾರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಸೂಕ್ತ ಕ್ರಮ ವಹಿಸುವಂತೆ ದೆಹಲಿ ಅಧಿಕಾರಿಗಳಿಗೆ ಕೇಂದ್ರದ ಅಲರ್ಟ್ ನೀಡಲಾಗಿದೆ.
ಸೋಂಕಿತನನ್ನ ಐಸೊಲೇಷನ್ ಮಾಡಲು ಸೂಚನೆ ನೀಡಲಾಗಿದೆ. ಸೋಂಕು ಹರಡದಂತೆ ಗೈಡ್ಲೈನ್ ಅನುಸರಿಸಲು ಸಲಹೆ ಕೊಡಲಾಗಿದೆ. 31 ವರ್ಷದ ವ್ಯಕ್ತಿಗೆ ಮೈಮೇಲೆ ಗುಳ್ಲೆಗಳು ಹಾಗೂ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯದಲ್ಲಿ ಸ್ಥಿರತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಂಕಿಪಾಕ್ಸ್ ರೋಗಲಕ್ಷಣ ಕಾಣಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ದೆಹಲಿಯ ನಿವಾಸಿಯಾಗಿರುವ ವ್ಯಕ್ತಿಯನ್ನು ಮೂರು ದಿನಗಳ ಹಿಂದೆ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಮಾದರಿಯನ್ನು ಶನಿವಾರ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಗೆ ಕಳುಹಿಸಲಾಗಿತ್ತು ವರದಿಯಲ್ಲಿ ಮಂಕಿ ಫಾಕ್ಸ್ ಪಾಸಿಟಿವ್ ಕಂಡು ಬಂದಿದೆ.
Advertisement