ಮಾಜಿ ಕೇಂದ್ರ ಸಚಿವ ಪಾಸ್ವಾನ್ ಅವರಿದ್ದ ಸರ್ಕಾರಿ ಬಂಗಲೆ ಈಗ ಮಾಜಿ ರಾಷ್ಟ್ರಪತಿ ಕೋವಿಂದ್ ಅಧಿಕೃತ ನಿವಾಸ

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ, ತಮ್ಮ ಅಧಿಕೃತ ನಿವಾಸವನ್ನು ಜನಪತ್ ನ ಬಂಗಲೆಗೆ ವರ್ಗಾಯಿಸಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ, ತಮ್ಮ ಅಧಿಕೃತ ನಿವಾಸವನ್ನು ಜನಪತ್ ನ ಬಂಗಲೆಗೆ ವರ್ಗಾಯಿಸಿದ್ದಾರೆ.
 
ಜನಪಥ್ ನಲ್ಲಿ ಈ ಹಿಂದೆ ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿದ್ದ ಬಂಗಲೆಯಲ್ಲಿ ಇನ್ನು ಮುಂದೆ  ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಾಸವಿರಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಅಧಿಕಾರ ಹಸ್ತಾಂತರಿಸಿದ ಬಳಿಕ ಕೋವಿಂದ್ ತಮ್ಮ ಹೊಸ ನಿವಾಸಕ್ಕೆ ಪ್ರವೇಶಿಸಿದ್ದು, ಈ ಬಂಗಲೆಯಲ್ಲಿ 12 ಪಾಸ್ವಾನ್ ಮೂರು ದಶಕಗಳ ಕಾಲ ವಾಸವಿದ್ದರು. 

ಈ ಬಂಗಲೆಯನ್ನು ಖಾಲಿ ಮಾಡುವಂತೆ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಗೆ ನೊಟೀಸ್ ಜಾರಿಗೊಳಿಸಿದ ಬಳಿಕ ಏಪ್ರಿಲ್ ನಲ್ಲಿ ಬಂಗಲೆ ಖಾಲಿಯಾಗಿತ್ತು. ಬಳಿಕ ಅದನ್ನು ಮಾಜಿ ರಾಷ್ಟ್ರಪತಿಗಳ ವಾಸ್ತವ್ಯಕ್ಕೆ ಸಿದ್ಧಪಡಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com