ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಕೋವಿಡ್ ಪಾಸಿಟೀವ್ 

ಕೋವಿಡ್-19 ಲಸಿಕೆ ತೆಗೆದುಕೊಂಡಿದ್ದೇವೆ. ಇತ್ತೀಚಿಗೆ ಪ್ರಕರಣಗಳ ಸಂಖ್ಯೆಯಲ್ಲೂ ಅಂಥಹದ್ದೇನು ಏರಿಕೆ ಕಂಡುಬಂದಿಲ್ಲ, ಆದ್ದರಿಂದ ಕೋವಿಡ್-19 ಕಣ್ಮರೆಯಾಯ್ತು ಎಂದುಕೊಳ್ಳಬೇಡಿ, ಕೋವಿಡ್-19 ನಿಯಮಗಳನ್ನು ಪಾಲಿಸುವ ಅಗತ್ಯ ಇಂದಿಗೂ ಇದೆ. 
ತುಷಾರ್ ಮೆಹ್ತಾ
ತುಷಾರ್ ಮೆಹ್ತಾ

ನವದೆಹಲಿ: ಕೋವಿಡ್-19 ಲಸಿಕೆ ತೆಗೆದುಕೊಂಡಿದ್ದೇವೆ. ಇತ್ತೀಚಿಗೆ ಪ್ರಕರಣಗಳ ಸಂಖ್ಯೆಯಲ್ಲೂ ಅಂಥಹದ್ದೇನು ಏರಿಕೆ ಕಂಡುಬಂದಿಲ್ಲ, ಆದ್ದರಿಂದ ಕೋವಿಡ್-19 ಕಣ್ಮರೆಯಾಯ್ತು ಎಂದುಕೊಳ್ಳಬೇಡಿ, ಕೋವಿಡ್-19 ನಿಯಮಗಳನ್ನು ಪಾಲಿಸುವ ಅಗತ್ಯ ಇಂದಿಗೂ ಇದೆ.

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಸಣ್ಣ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈ ನಡುವೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋವಿಡ್-19 ಸೋಂಕಿಗೆ ಗುರಿಯಾಗಿದ್ದಾರೆ. ಸಾಲಿಸಿಟರ್ ಜನರಲ್ ಕಚೇರಿಯ ಹೇಳಿಕೆಯ ಪ್ರಕಾರ, ತುಷಾರ್ ಮೆಹ್ತಾಗೆ ಭಾನುವಾರ ರಾತ್ರಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದಾರೆ.

"ಶನಿವಾರದಿಂದಲೇ ಸಣ್ಣ ಪ್ರಮಾಣದಲ್ಲಿ ಕೋವಿಡ್-19 ರೋಗ ಲಕ್ಷಣಗಳು ಎದುರಾಗಿತ್ತು, ನನ್ನನ್ನು ನಾನು ಪ್ರತ್ಯೇಕಿಸಿಕೊಂಡಿದ್ದೇನೆ" ಎಂದು ಮೆಹ್ತಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 

ಸುಪ್ರೀಂ ಕೋರ್ಟ್ ನಲ್ಲಿ ಜು.25 ರಂದು ನಡೆಯಲಿರುವ 2-3 ವಿಚಾರಣೆಗಳಿಗೆ ಸಾಲಿಸಿಟರ್ ಜನರಲ್ ವರ್ಚ್ಯುಯಲ್ ಆಗಿ ಹಾಜರಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com