ಚೆಸ್ ಒಲಿಂಪಿಯಾಡ್ ಜಾಹೀರಾತಿನ ಭಿತ್ತಿಪತ್ರದ ಮೇಲೆ ಪ್ರಧಾನಿ ಮೋದಿ ಚಿತ್ರ ಅಂಟಿಸಿದ ಬಿಜೆಪಿ ಕಾರ್ಯಕರ್ತರು!

44ನೇ ಚೆಸ್ ಒಲಿಂಪಿಯಾಡ್ ಜಾಹೀರಾತಿನ ಭಿತ್ತಿಪತ್ರದಲ್ಲಿ ಉದ್ದೇಶಪೂರ್ವಕವಾಗಿಯೇ ಪ್ರಧಾನಿ ಮೋದಿ ಅವರ ಫೋಟೋವನ್ನು ಮುದ್ರಿಸಿಲ್ಲ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಭಿತ್ತಿಪತ್ರದ ಮೇಲೆ ಮೋದಿ ಅವರ ಭಾವಚಿತ್ರವನ್ನು ಅಂಟಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು
ಬಿಜೆಪಿ ಕಾರ್ಯಕರ್ತರು

ಚೆನ್ನೈ: 44ನೇ ಚೆಸ್ ಒಲಿಂಪಿಯಾಡ್ ಜಾಹೀರಾತಿನ ಭಿತ್ತಿಪತ್ರದಲ್ಲಿ ಉದ್ದೇಶಪೂರ್ವಕವಾಗಿಯೇ ಪ್ರಧಾನಿ ಮೋದಿ ಅವರ ಫೋಟೋವನ್ನು ಮುದ್ರಿಸಿಲ್ಲ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಭಿತ್ತಿಪತ್ರದ ಮೇಲೆ ಮೋದಿ ಅವರ ಭಾವಚಿತ್ರವನ್ನು ಅಂಟಿಸಿದ್ದಾರೆ.

ಜುಲೈ 28ರಿಂದ ನಡೆಯಲಿರುವ ಚೆಸ್ ಒಲಿಂಪಿಯಾಡ್ ಅನ್ನು ತಮಿಳುನಾಡು ಸರ್ಕಾರ ಮತ್ತು ಸಿಎಂ ಸ್ಟಾಲಿನ್ ಹೈಜಾಕ್ ಮಾಡಲು ಹೊರಟ್ಟಿದ್ದು ಈ ಹಿನ್ನೆಲೆಯಲ್ಲಿ ಜಾಹೀರಾತಿನ ಭಿತ್ತಿಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋವನ್ನು ಮುದ್ರಿಸಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. 

ಜಾಹೀರಾತು ಭಿತ್ತಿಪತ್ರದಲ್ಲಿ ಮೋದಿ ಅವರ ಫೋಟೋವನ್ನು ಬಿಜೆಪಿ ಕಾರ್ಯಕರ್ತರು ಅಂಟಿಸುತ್ತಿರುವ ವಿಡಿಯೋವನ್ನು ತಮಿಳುನಾಡು ಬಿಜೆಪಿಯ ಕ್ರೀಡಾ ಮತ್ತು ಕೌಶಲ್ಯಾಭಿವೃದ್ಧಿ ಘಟಕದ ಅಧ್ಯಕ್ಷ ಅಮರ್ ಪ್ರಸಾದ್ ರೆಡ್ಡಿ ಟ್ವೀಟ್ ಮಾಡಿದ್ದಾರೆ. 

ಚೆನ್ ಒಲಿಂಪಿಯಾಡ್ ಡಿಎಂಕೆ ಪಕ್ಷ ಅಥವಾ ರಾಜ್ಯ ಮಟ್ಟದ ಕಾರ್ಯಕ್ರಮವಲ್ಲ. ಅಂತಾರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ ಆಗಿದೆ. ಸರ್ಕಾರ ಪ್ರಯೋಜಿತ ಕಾರ್ಯಕ್ರಮ ಆಗಿರುವುದರಿಂದ ಭಿತ್ತಿಪತ್ರದಲ್ಲಿ ಪ್ರಧಾನಿ ಅವರ ಫೋಟೋ ಹಾಕದೆ ಇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

44ನೇ ಚೆಸ್ ಒಲಿಂಪಿಯಾಡ್ ಟೂರ್ನಮೆಂಟ್ ಜುಲೈ 28ರಿಂದ ಮಾಮಲಾಪುರಂನಲ್ಲಿ ಪ್ರಾರಂಭವಾಗಲಿದ್ದು ಆಗಸ್ಟ್ 10ಕ್ಕೆ ಮುಗಿಯಲಿದೆ. ಈ ಕಾರ್ಯಕ್ರಮ ಆಯೋಜನೆಗಾಗಿ ರಾಜ್ಯ ಸರ್ಕಾರ 92.13 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com