ಪಿಎಫ್‌ಐನ ಉಗ್ರ ಸಂಪರ್ಕ: ಮೋತಿಹಾರಿ, ನಳಂದಾ ಮತ್ತು ದರ್ಭಾಂಗನಲ್ಲಿ ಎನ್ಐಎ ದಾಳಿ

ಫುಲ್ವಾರಿ ಶರೀಫ್ ಟೆರರ್ ಮಾಡ್ಯೂಲ್ ಪ್ರಕರಣದಲ್ಲಿ ಎನ್‌ಐಎ ತಂಡ ಬಿಹಾರದ ದರ್ಭಾಂಗ, ಮೋತಿಹಾರಿ ಮತ್ತು ನಳಂದಾ ಮೇಲೆ ದಾಳಿ ನಡೆಸಿದೆ. 
ಎನ್ಐಎ
ಎನ್ಐಎ

ಪಾಟ್ನಾ: ಫುಲ್ವಾರಿ ಶರೀಫ್ ಟೆರರ್ ಮಾಡ್ಯೂಲ್ ಪ್ರಕರಣದಲ್ಲಿ ಎನ್‌ಐಎ ತಂಡ ಬಿಹಾರದ ದರ್ಭಾಂಗ, ಮೋತಿಹಾರಿ ಮತ್ತು ನಳಂದಾ ಮೇಲೆ ದಾಳಿ ನಡೆಸಿದೆ. 

ಬೆಳಗ್ಗೆಯಿಂದಲೇ ಈ ಕಾರ್ಯ ನಡೆಯುತ್ತಿದೆ. ಪೂರ್ವ ಚಂಪಾರಣ್ ಮತ್ತು ದರ್ಭಾಂಗ ಜಿಲ್ಲೆಯಲ್ಲಿ ಪಿಎಫ್‌ಐನ ಭಯೋತ್ಪಾದಕ ಸಂಪರ್ಕದ ಬಗ್ಗೆ ಬೆಳಿಗ್ಗೆ 7 ಗಂಟೆಯಿಂದ ಎನ್‌ಐಎ ತಂಡ ದಾಳಿ ನಡೆಸಿದೆ. ಎನ್‌ಐಎ ತಂಡ ಇಂದು ಬೆಳಗ್ಗೆ ಚಾಕಿಯಾ ಮತ್ತು ಮೋತಿಹಾರಿ ತಲುಪಿದ್ದು ಚಕಿಯಾದ ಕುವಾನ್ ಗ್ರಾಮದಲ್ಲಿರುವ ಪಿಎಫ್‌ಐ ಪ್ರಧಾನ ಕಾರ್ಯದರ್ಶಿ ರಿಯಾಜ್ ಮಾರುಫ್ ಅಲಿಯಾಸ್ ಬಬ್ಲು ಮನೆಯಲ್ಲಿ ಎನ್‌ಐಎ ಶೋಧ ನಡೆಸುತ್ತಿದೆ.

ಮತ್ತೊಂದು ತಂಡ ಎನ್‌ಐಎ ತಂಡವು ರಿಯಾಜ್ ಪೂರ್ವಜರ ಮನೆಯಲ್ಲಿ ಶೋಧ ನಡೆಸುತ್ತಿದೆ. ರಿಯಾಜ್ ಪಿಎಫ್‌ಐನ ಮಾಸ್ಟರ್ ಟ್ರೈನರ್ ಎಂದು ಆರೋಪಿಸಲಾಗಿದೆ. ಆತನ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುತ್ತಿದೆ. ರಿಯಾಜ್ ಇನ್ನೂ ತಲೆಮರೆಸಿಕೊಂಡಿದ್ದು, ಎನ್‌ಐಎ ಆತನಿಗಾಗಿ ಹುಡುಕಾಟ ನಡೆಸುತ್ತಿದೆ. 

ಇದೇ ಸಮಯದಲ್ಲಿ, ದರ್ಭಾಂಗಾದಲ್ಲಿ PFI ಸದಸ್ಯರ ಮನೆ ಮೇಲೆ NIA ದಾಳಿ ನಡೆಯುತ್ತಿದೆ. ಲಾಹೇರಿಯಾಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಉರ್ದು ಬಜಾರ್‌ನಲ್ಲಿ ನೂರುದ್ದೀನ್ ಜಂಗಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ನೂರುದ್ದೀನ್ ಜಂಗಿಯನ್ನು ಲಖನೌದಲ್ಲಿ ಬಂಧಿಸಲಾಗಿತ್ತು. ಆತನಿಂದ ಸಿಕ್ಕ ಮಾಹಿತಿ ನಂತರ ಇದೀಗ ಎನ್‌ಐಎ ತಂಡ ಪಾಕಿಸ್ತಾನಕ್ಕೆ ಸಂಬಂಧಿಸಿದ ಭಯೋತ್ಪಾದಕ ಸಂಪರ್ಕದ ತನಿಖೆಯಲ್ಲಿ ತೊಡಗಿದೆ. 

ಸೊಹ್ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಮಹುವಾ ತೋಲಾ, ಬಿಹಾರ ಷರೀಫ್ ಪ್ರಧಾನ ಕಛೇರಿಯ ಲಾಹೇರಿ ಪೊಲೀಸ್ ಠಾಣೆ ಪ್ರದೇಶ, ಮೊಹಮ್ಮದ್ ಅಸ್ಗರ್ ಅಲಿ(ಎಂಡಿ ಅಸ್ಗರ್ ಅಲಿ) ಮತ್ತು ಬಿಹಾರ ಪೊಲೀಸರ ಗಢ್‌ಪರ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳ ಸಮ್ಮುಖದಲ್ಲಿ ಎನ್‌ಐಎ ತಂಡವು ದಾಳಿ ನಡೆಸುತ್ತಿದೆ. ಈ ದಾಳಿ ನಡೆಸುತ್ತಿರುವ ಸ್ಥಳಗಳೆಲ್ಲ ಎಸ್‌ಡಿಪಿಐ ಸಂಘಟನೆಗೆ ಸಂಬಂಧಿಸಿದವರದ್ದು ಎಂದು ಹೇಳಲಾಗುತ್ತಿದೆ. ಬೆಳಗ್ಗೆಯಿಂದಲೇ ದಿಢೀರ್ ಎನ್ ಐಎ ದಾಳಿ ನಡೆಸಿದ್ದರಿಂದ ಸ್ಥಳದಲ್ಲಿ ಸಂಚಲನ ಉಂಟಾಗಿದೆ. ಪಾಟ್ನಾದ ಫುಲ್ವಾರಿಯಿಂದ ಪಿಎಫ್‌ಐನ ಅಥರ್ ಪರ್ವೇಜ್ ಮತ್ತು ಜಲಾಲುದ್ದೀನ್ ಅವರನ್ನು ಬಂಧಿಸಿದ ನಂತರ, ತನಿಖೆಯ ಹಾದಿ ಮೋತಿಹಾರಿ, ನಳಂದಾ ಮತ್ತು ದರ್ಭಾಂಗವನ್ನು ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com