50 ಕೋಟಿ ರೂ. ನಗದು, ಅರ್ಧ ಕೆಜಿಯ 6 ಬಳೆ, ವಿದೇಶಿ ಕರೆನ್ಸಿ! 'ಕ್ಯಾಶ್ ಕ್ವೀನ್' ಅರ್ಪಿತಾ ಮನೆಯಲ್ಲಿ ಸಿಕ್ಕಿದ್ದು ಏನೇನು?

ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆಯಾಗಿದ್ದ ಅರ್ಪಿತಾ ಮುಖರ್ಜಿ ಹೆಸರು ಕಳೆದ ಒಂದು ವಾರದಿಂದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ನಟಿ ಅರ್ಪಿತಾ ಮನೆಯಲ್ಲಿ ಸಿಕ್ಕೆ ಹಣ ಹಾಗೂ ಚಿನ್ನ
ನಟಿ ಅರ್ಪಿತಾ ಮನೆಯಲ್ಲಿ ಸಿಕ್ಕೆ ಹಣ ಹಾಗೂ ಚಿನ್ನ
Updated on

ಕೋಲ್ಕತ್ತಾ: ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆಯಾಗಿದ್ದ ಅರ್ಪಿತಾ ಮುಖರ್ಜಿ ಹೆಸರು ಕಳೆದ ಒಂದು ವಾರದಿಂದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಅರ್ಪಿತಾ ಅವರನ್ನು 'ಧನ ಕನ್ಯೆ' ಎಂದು ಕರೆಯುತ್ತಿದ್ದರೆ, ಕೆಲವರು 'ಕ್ಯಾಶ್ ಕ್ವೀನ್' ಎಂದು ಕರೆಯುತ್ತಿದ್ದಾರೆ.

ಏನೇ ಆಗಲಿ, ಇಡಿ ದಾಳಿಯಲ್ಲಿ ಅರ್ಪಿತಾ ಮನೆಯಲ್ಲಿ 500-2000 ನೋಟುಗಳ ಬಂಡಲ್‌ಗಳು ಪತ್ತೆಯಾಗುತ್ತಿರುವ ರೀತಿಯನ್ನು ನೋಡಿದ ನಂತರ ಆಕೆಗೆ ಈ ಹೆಸರನ್ನು ಇಡುವುದು ಅನಿವಾರ್ಯವಾಗಿದೆ. ಅರ್ಪಿತಾ ಮುಖರ್ಜಿ ಅವರ ಮನೆಯಿಂದ ಇಡಿ ಇದುವರೆಗೆ 50 ಕೋಟಿ ರೂ. ಅಷ್ಟೇ ಅಲ್ಲ, ಬುಧವಾರ ನಡೆದ ದಾಳಿಯಲ್ಲಿ ಇಡಿ 4.30 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನೂ ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಅರ್ಧ-ಅರ್ಧ ಕೆಜಿಯ 6 ಬಳೆಗಳನ್ನು ಸಹ ಒಳಗೊಂಡಿದೆ.

ಮೊದಲ ದಿನದ ದಾಳಿಯಲ್ಲಿ ಸಿಕ್ಕಿದ್ದೇನು?

ಜುಲೈ 23 ರಂದು ಅರ್ಪಿತಾ ಅವರ ಫ್ಲ್ಯಾಟ್ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಇಡಿಗೆ ಸುಮಾರು 21 ಕೋಟಿ ರೂಪಾಯಿ ನಗದು ಸಿಕ್ಕಿತ್ತು. ಅಷ್ಟೇ ಅಲ್ಲ, ಅರ್ಪಿತಾ ಮನೆಯಲ್ಲಿದ್ದ 20 ಮೊಬೈಲ್‌ಗಳು ಮತ್ತು 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಇಡಿ ವಶಪಡಿಸಿಕೊಂಡಿತ್ತು. ಇದಾದ ಬಳಿಕ ಇಡಿ ಅಧಿಕಾರಿಗಳು ಅರ್ಪಿತಾ ಮುಖರ್ಜಿ ಅವರನ್ನು ಬಂಧಿಸಿತ್ತು.

ಇಡಿ ವಿಚಾರಣೆಯಲ್ಲಿ ಅರ್ಪಿತಾ, ತಮ್ಮ ಇತರ ಕೆಲವು ಆಸ್ತಿಗಳನ್ನು ಉಲ್ಲೇಖಿಸಿದ್ದರು. ಇವುಗಳಲ್ಲಿ ಒಂದು ಕೋಲ್ಕತ್ತಾದ ಬೆಲ್ಘಾರಿಯಾದಲ್ಲಿ ಫ್ಲಾಟ್ ಕೂಡ ಆಗಿತ್ತು. ಈ ವೇಳೆ ತಡಮಾಡದ ಅಧಿಕಾರಿಗಳು, ಅರ್ಪಿತಾ ಹೇಳಿದ್ದ ಫ್ಲ್ಯಾಟ್ ನ ಬಾಗಿಲು ಮುರಿದು, ಒಳಪ್ರವೇಶಿಸಿದ್ದಾಗ ಅಧಿಕಾರಿಗಳು ಹೌಹಾರಿದ್ದರು. ಆ ದಿನ ಅರ್ಪಿತಾ ಮನೆಯಿಂದ 27.9 ಕೋಟಿ ರೂಪಾಯಿಯ 2000 ಮತ್ತು 5000 ರೂಪಾಯಿ ನೋಟುಗಳ ಬಂಡಲ್‌ಗಳು ಕಂಡುಬಂದಿದ್ದವು. 20-20 ಲಕ್ಷ ಮತ್ತು 50-50 ಲಕ್ಷದ ಕಟ್ಟುಗಳಲ್ಲಿ ನೋಟುಗಳನ್ನು ಜೋಡಿಸಿ ಇಡಲಾಗಿತ್ತು ಎಂದು ಹೇಳಲಾಗುತ್ತಿದೆ. ಎರಡೂ ದಿನದ ಪರಿಶೀಲನೆ ವೇಳೆ ಸುಮಾರು 50 ಕೋಟಿ (48.9 ಕೋಟಿ) ಮೌಲ್ಯದ ನಗದು ಹಾಗೂ ವಸ್ತುಗಳನ್ನು ಇ.ಡಿ ಸೀಜ್ ಮಾಡಿತ್ತು.

ಬುಧವಾರ ಅರ್ಪಿತಾ ಮುಖರ್ಜಿ ಅವರ ಎರಡನೇ ಫ್ಲಾಟ್‌ನಿಂದ ಅಧಿಕಾರಿಗಳು ಅಪಾರ ಪ್ರಮಾಣದ ಚಿನ್ನ ಪತ್ತೆ ಹಚ್ಚಿದ್ದಾರೆ. ಇಡಿ ಪ್ರಕಾರ, ದಾಳಿ ವೇಳೆ 4.31 ಕೋಟಿ ಮೌಲ್ಯದ ಚಿನ್ನ ಶೋಧ ಮಾಡಿದ್ದಾರೆ. ಇದರಲ್ಲಿ ತಲಾ 1 ಕೆಜಿಯ 3 ಚಿನ್ನದ ವಸ್ತುಗಳು, ಅರ್ಧರ್ಧ ಕೆಜಿಯ 6 ಚಿನ್ನದ ಬಳೆಗಳು ಮತ್ತು ಇತರ ಆಭರಣಗಳು ಸೇರಿವೆ. ಅಷ್ಟೇ ಅಲ್ಲ, ಈ ಅಡಗುತಾಣದಿಂದ ಚಿನ್ನದ ಪ್ಯಾನ್ ಕೂಡ ಪತ್ತೆಯಾಗಿದೆ.

ಅರ್ಪಿತಾ ಸಿಕ್ಕಿಬಿದ್ದಿದ್ದು ಹೇಗೆ?

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಮತಾ ಸರ್ಕಾರದಲ್ಲಿ ಸಚಿವ ಪಾರ್ಥ ಚಟರ್ಜಿ ಅವರ ನಿವಾಸದ ಮೇಲೆ ಇಡಿ ಇತ್ತೀಚೆಗೆ ದಾಳಿ ನಡೆಸಿತ್ತು. ಈ ವೇಳೆ ಪಾರ್ಥ ಚಟರ್ಜಿ ಅವರ ಮನೆಯಿಂದ ಇಡಿ ಕೆಲವು ಚೀಟಿಗಳನ್ನು ಪಡೆದಿತ್ತು. ಇವುಗಳಲ್ಲಿ ಒನ್ ಸಿಆರ್ ಅರ್ಪಿತಾ, ಫಾರ್ ಸಿಆರ್ ಅರ್ಪಿತಾ ಎಂದು ಬರೆಯಲಾಗಿತ್ತು. ಇದರಿಂದಲೇ ಅರ್ಪಿತಾ ಮುಖರ್ಜಿ ಬಳಿ ನಗದು ಇರಿಸಲಾಗಿದೆ ಎಂಬ ಐಡಿಯಾ ಇಡಿ ಅಧಿಕಾರಿಗಳಿಗೆ ಸಿಕ್ಕಿತ್ತು.

ಇದಾದ ಬಳಿಕ ಅರ್ಪಿತಾ ಮುಖರ್ಜಿ ಅವರ ಸ್ಥಳದ ಮೇಲೆ ಇಡಿ ದಾಳಿ ನಡೆಸಿ ನಗದು ವಶಪಡಿಸಿಕೊಂಡಿದೆ. ಇಡಿ ಮೂಲಗಳ ಪ್ರಕಾರ, ಜುಲೈ 23 ರಂದು ನಡೆದ ಕಾರ್ಯಾಚರಣೆಯಲ್ಲಿ, ಅರ್ಪಿತಾ ಮನೆಯಿಂದ ಬ್ಲ್ಯಾಕ್ ಡೈರಿಯನ್ನು ಸಹ ಪತ್ತೆ ಮಾಡಲಾಗಿದೆ. ಈ ಡೈರಿಯು ಬಂಗಾಳ ಸರ್ಕಾರದ ಉನ್ನತ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಡೈರಿಯಲ್ಲಿ 40 ಪುಟಗಳಿದ್ದು, ಶಿಕ್ಷಕರ ನೇಮಕಾತಿ ಹಗರಣದ ಹಲವು ಸ್ಫೋಟಕ ಸತ್ಯಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com