ಅರುಣಾಚಾಲ ಪ್ರದೇಶ: ನಾಪತ್ತೆಯಾಗಿದ್ದ ಐವರು ಕಾರ್ಮಿಕರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ 

ರಸ್ತೆ ನಿರ್ಮಾಣ ಸ್ಥಳದಿಂದ ನಾಪತ್ತೆಯಾಗಿದ್ದ 19 ಕಾರ್ಮಿಕರ ಪೈಕಿ ಐವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ದಟ್ಟವಾದ ಅರಣ್ಯ ಪ್ರದೇಶವೊಂದರಲ್ಲಿ ಪತ್ತೆಯಾಗಿದೆ ಎಂದು ಕುರಾಂಗ್ ಕುಮೆ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅರುಣಾಚಲ ಪ್ರದೇಶ: ರಸ್ತೆ ನಿರ್ಮಾಣ ಸ್ಥಳದಿಂದ ನಾಪತ್ತೆಯಾಗಿದ್ದ 19 ಕಾರ್ಮಿಕರ ಪೈಕಿ ಐವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ದಟ್ಟವಾದ ಅರಣ್ಯ ಪ್ರದೇಶವೊಂದರಲ್ಲಿ ಪತ್ತೆಯಾಗಿದೆ ಎಂದು ಕುರಾಂಗ್ ಕುಮೆ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಹುರಿ ಮತ್ತು ತಪಾ ನಡುವಿನ ದಟ್ಟ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ ಎಂದು ಕುರಾಂಗ್ ಕುಮೆ ಜಿಲ್ಲಾಧಿಕಾರಿ ನಿಘೆ ಬೆಂಗಿಯಾ ಹೇಳಿದ್ದಾರೆ. ಬೇರೆ ಬೇರೆ ದಿನ, ಬೇರೆ ಬೇರೆ ಕಡೆಗಳಲ್ಲಿ ಈ ಮೃತದೇಹಗಳು ಪತ್ತೆಯಾಗಿವೆ.  ಹಿಕ್ಮತ್ ಅಲಿ ಎಂಬ ಕಾರ್ಮಿಕ ಫುರಾಕ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ ಆರಕ್ಕೆ ಏರಿದೆ ಎಂದು ಬೆಂಗಿಯಾ ತಿಳಿಸಿದ್ದಾರೆ. 

ಅಸ್ಸಾಂ ಮೂಲದ ಕಾರ್ಮಿಕರು, ಜುಲೈ 5 ರಂದು ಈದ್ ಸಮಯದಲ್ಲಿ ಮನೆಗೆ ಹೋಗಲು ರಜೆ ನಿರಾಕರಿಸಿದ ನಂತರ ಭಾರತ-ಚೀನಾ ಗಡಿಯಲ್ಲಿರುವ ಕೊಲೊರಿಯಾಂಗ್ ಜಿಲ್ಲಾ ಕೇಂದ್ರದಿಂದ 200 ಕಿಮೀ ದೂರದಲ್ಲಿರುವ ಡಾಮಿನ್ ವೃತ್ತದ ರಸ್ತೆ ನಿರ್ಮಾಣ ಸ್ಥಳದಿಂದ  ಪಲಾಯನವಾಗಿದ್ದರು. ಎರಡು ಗುಂಪುಗಳಾಗಿ ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ಹೊರಟರು ಮತ್ತು ಅಂದಿನಿಂದ ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ 10 ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಬೆಂಗಿಯಾ ಹೇಳಿದರು.

ನಾಪತ್ತೆಯಾಗಿರುವ ಉಳಿದ ಮೂವರು ಕಾರ್ಮಿಕರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸುವಂತೆ ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ತಂಡಗಳಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜುಲೈ 23 ರಂದು ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದ ಐಎಎಫ್ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ಅದನ್ನು ಸ್ಥಗಿತಗೊಳಿಸಿತು ಮತ್ತು ಉತ್ತಮ ಹವಾಮಾನ ಪುನರಾರಂಭಕ್ಕಾಗಿ ಕಾಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com