ಒಂದೇ ಸಿರಿಂಜ್‌ನಿಂದ 39 ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಿದ್ದ ವ್ಯಕ್ತಿ ಬಂಧನ

ಮಧ್ಯಪ್ರದೇಶದ ಸಾಗರ್ ನಗರದ ಖಾಸಗಿ ಶಾಲೆಯೊಂದರಲ್ಲಿ 39 ಮಕ್ಕಳಿಗೆ ಕರೋನಾ ವೈರಸ್ ವಿರೋಧಿ ಲಸಿಕೆ ಡೋಸ್ ಅನ್ನು ಒಂದೇ ಸಿರಿಂಜ್ ಬಳಸಿ ನೀಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ
ಬಂಧಿತ ಆರೋಪಿ
Updated on

ಮಧ್ಯಪ್ರದೇಶ: ಮಧ್ಯಪ್ರದೇಶದ ಸಾಗರ್ ನಗರದ ಖಾಸಗಿ ಶಾಲೆಯೊಂದರಲ್ಲಿ 39 ಮಕ್ಕಳಿಗೆ ಕರೋನಾ ವೈರಸ್ ವಿರೋಧಿ ಲಸಿಕೆ ಡೋಸ್ ಅನ್ನು ಒಂದೇ ಸಿರಿಂಜ್ ಬಳಸಿ ನೀಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮತ್ತು ಜಿಲ್ಲಾ ಲಸಿಕೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಜೈನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೆಗಾ ಲಸಿಕೆ ಅಭಿಯಾನದ ವೇಳೆ ಬುಧವಾರ ಈ ಘಟನೆ ನಡೆದಿದ್ದು, ಜಿತೇಂದ್ರ ಅಹಿರ್ವಾರ್ ಎಂಬುವವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಹಿರ್ವಾರ್ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆರೋಗ್ಯ ಇಲಾಖೆಯಿಂದ ಲಸಿಕೆ ಕಾರ್ಯಕ್ರಮವನ್ನು ಕೈಗೊಳ್ಳಲು ತರಬೇತಿ ಪಡೆದಿದ್ದರು ಎಂದು ಸಾಗರ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ ಡಿ ಕೆ ಗೋಸ್ವಾಮಿ ತಿಳಿಸಿದ್ದಾರೆ.

ಆದಾಗ್ಯೂ ವೈರಲ್ ವೀಡಿಯೊವೊಂದರಲ್ಲಿ, ವ್ಯಾಕ್ಸಿನೇಟರ್ ತನ್ನ ವಿಭಾಗದ ಮುಖ್ಯಸ್ಥರು  (ಎಚ್‌ಒಡಿ) ತನ್ನನ್ನು ಕಾರಿನಲ್ಲಿ ಶಾಲೆಗೆ ಕರೆತಂದು ಬಿಟ್ಟರು. ಅವರಿಗೆ ಒದಗಿಸಲಾದ ಒಂದೇ ಸಿರಿಂಜ್‌ನೊಂದಿಗೆ ಕೇಂದ್ರದಲ್ಲಿ ಹಾಜರಿದ್ದ ಎಲ್ಲರಿಗೂ ಚುಚ್ಚುಮದ್ದು ನೀಡಿಲು ಹೇಳಿದರು. ನನ್ನದೇನೂ ತಪ್ಪಿಲ್ಲ ಎಂದು ವಿಡಿಯೋದಲ್ಲಿ ಆರೋಪಿ ನರ್ಸಿಂಗ್ ವಿದ್ಯಾರ್ಥಿ  ಜಿತೇಂದ್ರ ಅಹಿರ್ವಾಲ್ ಹೇಳಿಕೊಂಡಿದ್ದಾರೆ.

ಅಹಿರ್ವಾರ್ ಅವರ ಆರೋಪಗಳ ಬಗ್ಗೆ ಸಿಎಂಎಚ್‌ಒ ಡಾ.ಗೋಸ್ವಾಮಿ ಅವರನ್ನು ಕೇಳಿದಾಗ, ಇದು ತನಿಖೆಯ ವಿಷಯವಾಗಿದೆ ಮತ್ತು ಘಟನೆಗೆ ಕಾರಣರಾದ ಜಿಲ್ಲಾ ವ್ಯಾಕ್ಸಿನೇಷನ್ ಅಧಿಕಾರಿಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.

ಸಂಬಂಧಿತ ಬೆಳವಣಿಗೆಯಲ್ಲಿ ಪೊಲೀಸರು ಗುರುವಾರ ಸಂಜೆ ಸಾಗರ್ ನಗರದಿಂದ ಅಹಿರ್ವಾರ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಎಫ್‌ಐಆರ್ ದಾಖಲಿಸಿದ ಗೋಪಾಲ್‌ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಕಮಲ್ ಸಿಂಗ್ ಠಾಕೂರ್ ಹೇಳಿದ್ದಾರೆ.

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 39 ಮಕ್ಕಳು 9 ರಿಂದ 12 ನೇ ತರಗತಿಯವರು ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ಕೆಲವು ವಿದ್ಯಾರ್ಥಿಗಳ ಪೋಷಕರು ಮಕ್ಕಳಿಗೆ ಲಸಿಕೆ ಹಾಕಲು ಒಂದೇ ಸಿರಿಂಜ್ ಅನ್ನು ಬಳಸುತ್ತಿರುವುದನ್ನು ಗಮನಿಸಿ ಪ್ರತಿಭಟಿಸಿದರು. ನಂತರ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com