ನಾಲ್ಕು ಕಾಲು, ನಾಲ್ಕು ಕೈ ಹೊಂದಿರುವ ಮಗುವಿನ ಬದುಕು ಹಸನಾಗಿಸಿದ ನಟ ಸೋನು ಸೂದ್
ಬಾಲಿವುಡ್ ನಟ ಸೋನು ಸೂದ್ ಮಾನವೀಯ ನೆಲೆಗಟ್ಟಿನಲ್ಲಿ ಇದುವರೆಗೆ ಹಲವರಿಗೆ ನೆರವಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಒಂಟಿ ಕಾಲಿನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಸ್ಟಂಟ್ ಕಾಲು ಕೊಡಿಸಿ...
Published: 11th June 2022 04:48 PM | Last Updated: 11th June 2022 04:48 PM | A+A A-

ಸೋನು ಸೂದ್ - ಬಾಲಕಿ
ನವದೆಹಲಿ: ಬಾಲಿವುಡ್ ನಟ ಸೋನು ಸೂದ್ ಮಾನವೀಯ ನೆಲೆಗಟ್ಟಿನಲ್ಲಿ ಇದುವರೆಗೆ ಹಲವರಿಗೆ ನೆರವಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಒಂಟಿ ಕಾಲಿನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಸ್ಟಂಟ್ ಕಾಲು ಕೊಡಿಸಿ, ಆಕೆಯ ಬದುಕಿಗೊಂದು ವಿಶ್ವಾಸ ತುಂಬಿದ್ದರು.
ಇದೀಗ ಮತ್ತೊಂದು ಮಗುವಿನ ಬದುಕಿಗೆ ಆಶಾ ಕಿರಣವಾಗಿದ್ದಾರೆ. ಹೌದು ನಾಲ್ಕು ಕಾಲು, ನಾಲ್ಕು ಕೈ ಹೊಂದಿರುವ ಬಿಹಾರದ ಮಗುವಿಗೆ ಸಹಾಯ ಹಸ್ತ ಚಾಚಿದ್ದಾರೆ.
ಇದನ್ನು ಓದಿ: ಉಕ್ರೇನ್ ನಲ್ಲಿರುವ ಭಾರತೀಯರಿಗೂ ನಟ ಸೋನು ಸೂದ್ ನೆರವಿನ ಹಸ್ತ; ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಶ್ಲಾಘನೆ!
ಚೌಮುಕಿ ಎಂಬ ಮಗು ಹುಟ್ಟುವಾಗಲೇ ನಾಲ್ಕು ಕಾಲು, ನಾಲ್ಕು ಕೈ ಹೊಂದಿತ್ತು. ಮಗುವನ್ನು ಭೇಟಿ ಮಾಡಿದ ಅವರು ಮಗುವಿನ ಶಸ್ತ್ರಚಿಕಿತ್ಸೆಗೆ ಹಣ ನೀಡಿ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಆ ಮಗುವಿನ ಜೀವನವನ್ನು ಸುಂದರವನ್ನಾಗಿ ಮಾಡಿದ್ದಾರೆ. ಈ ಕುರಿತಾಗಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಚೌಮುಖಿ ತನ್ನ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಫೋಟೋ ಹಂಚಿಕೊಂಡ ಅವರು, ಚೌಮುಖಿಯೊಂದಿಗಿನ ನನ್ನ ಪ್ರಯಾಣ ಯಶಸ್ವಿಯಾಗಿದೆ. ಚೌಮುಖಿ ನಾಲ್ಕು ಕಾಲುಗಳು ಮತ್ತು ನಾಲ್ಕು ಕೈಗಳೊಂದಿಗೆ ಜನಿಸಿದ ಬಿಹಾರದ ಹುಡುಗಿ. ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಈಗ ಅವಳು ತನ್ನ ಮನೆಗೆ ಮರಳಲು ಸಿದ್ಧಳಾಗಿದ್ದಾಳೆ ಎಂದು ಪೋಸ್ಟ್ ಮಾಡಿದ್ದಾರೆ.
देश के सबसे मुश्किल ऑपरेशन में से एक..सफल
— sonu sood (@SonuSood) June 9, 2022
धन्यवाद @Kiran_Hospital @MathurSavani #drmithun @SoodFoundation https://t.co/LulpJRHEGt pic.twitter.com/UZ3dCrlIH4