ಲೈಂಗಿಕ ದೌರ್ಜನ್ಯ ವಿರೋಧಿಸಿದ ಮಹಿಳೆ ಮುಖದ ಮೇಲೆ 118 ಹೊಲಿಗೆ!

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಪ್ರಯತ್ನಗಳನ್ನು ವಿರೋಧಿಸಿದ್ದಕ್ಕೆ ಅವರ ಮುಖದ ಮೇಲೆ 118 ಹೊಲಿಗೆಗಳಾಗಿದ್ದು, ನೋವು ಅನುಭವಿಸುತ್ತಿದ್ದಾರೆ.
ನೊಂದ ಮಹಿಳೆಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ನೊಂದ ಮಹಿಳೆಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಪ್ರಯತ್ನಗಳನ್ನು ವಿರೋಧಿಸಿದ್ದಕ್ಕೆ ಅವರ ಮುಖದ ಮೇಲೆ 118 ಹೊಲಿಗೆಗಳಾಗಿದ್ದು, ನೋವು ಅನುಭವಿಸುತ್ತಿದ್ದಾರೆ. ಪುರುಷರ ಗುಂಪೊಂದು ಪೇಪರ್ ಕಟ್ಟರ್ ನಿಂದ ದಾಳಿ ಮಾಡಿದ ನಂತರ ಆಕೆಯ ಮುಖಕ್ಕೆ 118 ಹೊಲಿಗೆಗಳನ್ನು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೋಪಾಲ್ ನ ಟಿಟಿ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಹಿಳೆ ತನ್ನ ಪತಿಯೊಂದಿಗೆ ಟಿಟಿನಗರದ ರೋಶನಪುರದ ಪ್ಯಾಲೇಸ್ ಹೋಟೆಲ್ ಗೆ ತೆರಳಿದ್ದ ವೇಳೆ ಬೈಕ್ ಪಾರ್ಕಿಂಗ್ ವಿಚಾರವಾಗಿ ಆರೋಪಿ ಹಾಗೂ ಮಹಿಳೆ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪತಿ ಹೋಟೆಲ್ ನಲ್ಲಿದ್ದಾಗ ಆರೋಪಿಗಳು ಗುಂಪು ಆಶ್ಲೀಲ ಕಾಮೆಂಟ್ ಮಾಡಿ ಶಿಳ್ಳೆ ಹಾಕಿದ್ದಾರೆ. ಮಹಿಳೆ ಆರೋಪಿಗಳನ್ನು ಎದುರಿಸಿ ಮೂವರಲ್ಲಿ ಒಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಮಹಿಳೆ ಹೋಟೆಲ್ ಒಳಗೆ ಹೋಗಿ ತನ್ನ ಪತಿಯೊಂದಿಗೆ ಹೊರಬಂದಾಗ, ಕೋಪಗೊಂಡ ಆರೋಪಿಗಳು ಪೇಪರ್ ಕಟರ್ ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಗಂಭೀರವಾದ ಗಾಯಗಳಿಗೆ ಚಿಕಿತ್ಸೆ ನೀಡಲು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಪೊಲೀಸರು ಹೋಟೆಲ್ ನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಜಾಲಾಡಿದ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದು ಬೆಳಗ್ಗೆ ದಂಪತಿಯನ್ನು ಭೇಟಿ ಮಾಡಿ ಅವರ ವೈದ್ಯಕೀಯ ಚಿಕಿತ್ಸೆಗೆ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಮಹಿಳೆಯ ಧೈರ್ಯವನ್ನು ಶ್ಲಾಘಿಸಿರುವ ಮುಖ್ಯಮಂತ್ರಿ, 1 ಲಕ್ಷ ಬಹುಮಾನವನ್ನು ಮಹಿಳೆಗೆ ನೀಡಿದ್ದಾರೆ. ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com