ಲಿವ್-ಇನ್ ಸಂಬಂಧದಲ್ಲಿ ಜನಿಸಿದ ಮಗು ಆಸ್ತಿಗೆ ಅರ್ಹ- ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಲಿವ್-ಇನ್ ರಿಲೇಷನ್‌ಶಿಪ್​ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಮದುವೆಯಿಲ್ಲದೆ ಹುಟ್ಟಿದ ಮಕ್ಕಳೂ ತಂದೆಯ ಆಸ್ತಿಗೆ ಹಕ್ಕುದಾರರು ಎಂದು ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ಲಿವ್-ಇನ್ ರಿಲೇಶನ್‌ಶಿಪ್​ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಮದುವೆಯಿಲ್ಲದೆ ಹುಟ್ಟಿದ ಮಕ್ಕಳೂ ತಂದೆಯ ಆಸ್ತಿಗೆ ಹಕ್ಕುದಾರರು ಎಂದು ಹೇಳಿದೆ.

ಒಬ್ಬ ಮಹಿಳೆ ಮತ್ತು ಪುರುಷ ದೀರ್ಘಕಾಲ ಒಟ್ಟಿಗೆ ವಾಸಿಸುತ್ತಿದ್ದರೆ ಅದನ್ನು ಮದುವೆ ಎಂದು ಪರಿಗಣಿಸಲಾಗುವುದು ಮತ್ತು ಈ ಸಂಬಂಧದಿಂದ ಹುಟ್ಟುವ ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕು ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ತಂದೆ-ತಾಯಿ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಮಗ ತಂದೆಯ ಆಸ್ತಿಯಲ್ಲಿ ಪಾಲುದಾರ ಎಂದು ಪರಿಗಣಿಸದ ಕೇರಳ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇಬ್ಬರೂ ಮದುವೆಯಾಗದೇ ಇರಬಹುದು, ಆದರೆ ಇಬ್ಬರೂ ಪತಿ-ಪತ್ನಿಯಂತೆ ಬಹಳ ಕಾಲ ಒಟ್ಟಿಗೆ ವಾಸಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ ಡಿಎನ್ ಎ ಪರೀಕ್ಷೆಯಲ್ಲಿ ಮಗು ಇಬ್ಬರದ್ದು ಎಂಬುದು ಸಾಬೀತಾದರೆ ತಂದೆಯ ಆಸ್ತಿಯ ಮೇಲೆ ಮಗುವಿಗೆ ಸಂಪೂರ್ಣ ಹಕ್ಕಿದೆ ಎಂದು ಹೇಳಿದೆ.

ಕೇರಳ ಹೈಕೋರ್ಟ್
ಕೇರಳದ ವ್ಯಕ್ತಿಯೊಬ್ಬರು ತಮ್ಮ ತಂದೆಯ ಆಸ್ತಿಯಲ್ಲಿ ಪಾಲು ಪಡೆಯುವುದಕ್ಕಾಗಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಅಕ್ರಮ ಮಗ ಎಂದು ಕರೆದು ತನಗೆ ಪಾಲು ನೀಡುತ್ತಿಲ್ಲ ಎಂದು ವಾದ ಮಾಡಲಾಗಿತ್ತು. ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಕೇರಳ ಹೈಕೋರ್ಟ್, ಆಸ್ತಿಗೆ ಹಕ್ಕು ನೀಡುವ ವ್ಯಕ್ತಿ ಹಾಗೂ ಆತನ ತಾಯಿ ಮದುವೆಯಾಗಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಆಸ್ತಿಗೆ ಅರ್ಹರು ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿತ್ತು.

ಲಿವ್ ಇನ್ ರಿಲೇಶನ್ ಬಗ್ಗೆ ಕಾನೂನು ಏನು ಹೇಳುತ್ತದೆ?
2010 ರಲ್ಲಿ ಸುಪ್ರೀಂ ಕೋರ್ಟ್ ಲಿವ್ ಇನ್ ರಿಲೇಶನ್ ಶಿಪ್ ಅನ್ನು ಗುರುತಿಸಿತು. ಇದರೊಂದಿಗೆ, ಕೌಟುಂಬಿಕ ದೌರ್ಜನ್ಯ ಕಾಯಿದೆ 2005 ರ ಸೆಕ್ಷನ್ 2 (ಎಫ್) ನಲ್ಲಿ ಲಿವ್ ಇನ್ ರಿಲೇಶನ್ ಅನ್ನು ಸಹ ಸೇರಿಸಲಾಗಿದೆ. ಅಂದರೆ, ಲಿವ್-ಇನ್‌ನಲ್ಲಿ ವಾಸಿಸುವ ದಂಪತಿಗಳು ಕೌಟುಂಬಿಕ ಹಿಂಸೆಯ ವರದಿಯನ್ನು ಸಹ ಸಲ್ಲಿಸಬಹುದು. ಲಿವ್ ಇನ್ ರಿಲೇಶನ್‌ಗಾಗಿ, ದಂಪತಿಗಳು ಪತಿ-ಪತ್ನಿಯಂತೆ ಒಟ್ಟಿಗೆ ಇರಬೇಕಾಗುತ್ತದೆ, ಆದರೆ ಇದಕ್ಕೆ ಯಾವುದೇ ಸಮಯದ ಮಿತಿಯಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com