'ಸುಳ್ಳು ಪಾಪಕ್ಕೆ ಸಮ': ಇಡಿ ವಿಚಾರಣೆಗೆ ಹಾಜರಾಗುವ ಮುನ್ನ ರಾಹುಲ್ ಗಾಂಧಿ ಟ್ವೀಟ್
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ವಿಚಾರಣೆ ಇಂದು ಮಂಗಳವಾರ ಕೂಡ ಜಾರಿ ನಿರ್ದೇಶನಾಲಯದಿಂದ ಮುಂದುವರಿಯಲಿದೆ.
Published: 14th June 2022 10:18 AM | Last Updated: 14th June 2022 01:22 PM | A+A A-

ರಾಹುಲ್ ಗಾಂಧಿ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ವಿಚಾರಣೆ ಇಂದು ಮಂಗಳವಾರ ಕೂಡ ಜಾರಿ ನಿರ್ದೇಶನಾಲಯದಿಂದ ಮುಂದುವರಿಯಲಿದೆ.
ಇನ್ನು ಕೆಲವೇ ಹೊತ್ತಿನಲ್ಲಿ ಅವರು ದೆಹಲಿಯ ಇಡಿ ಕಚೇರಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದು ಅದಕ್ಕೂ ಮುನ್ನ ದೆಹಲಿಯ ತುಘಲಕ್ ಲೇನ್ ರಸ್ತೆಯಲ್ಲಿರುವ ರಾಹುಲ್ ಗಾಂಧಿ ನಿವಾಸಕ್ಕೆ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗಮಿಸಿ ಸೋದರನ ಜೊತೆ ಚರ್ಚೆ ನಡೆಸಿದ್ದಾರೆ.
ಇಂದು ಬೆಳಗ್ಗೆ ಕಬೀರ್ ದಾಸ್ ಜಯಂತಿ ಪ್ರಯುಕ್ತ ಅವರ ದ್ವಿಪದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಸುಳ್ಳು ಪಾಪಕ್ಕೆ ಸಮ, ಸತ್ಯ ತಪಸ್ಸಿಗೆ ಸಮ, ಹೃದಯಕ್ಕೆ ಸರಿಯಾದ ಸತ್ಯ ಹೇಳಿದರೆ ಮನಸ್ಸು, ಹೃದಯ ನಿಮ್ಮದಾಗುತ್ತದೆ. ಸಮಾಜಕ್ಕೆ ಸಮಾನತೆ, ಸೇವೆ, ಪರಸ್ಪರ ಸೌಹಾರ್ದತೆ ಮತ್ತು ಪ್ರೀತಿಯ ಪಾಠವನ್ನು ಕಲಿಸಿದ ಸಂತ ಕಬೀರ್ ದಾಸ್ ಜೀ ಅವರ ಜನ್ಮದಿನದಂದು ಅವರಿಗೆ ನಮನಗಳು ಎಂದು ಬರೆದಿದ್ದಾರೆ.
“साँच बराबरि तप नहीं, झूठ बराबर पाप।
— Rahul Gandhi (@RahulGandhi) June 14, 2022
जाके हिरदै साँच है, ताकै हृदय आप॥”
समाज को समानता, सेवा, आपसी सौहार्द और प्रेम का पाठ पढ़ाने वाले संत कबीर दास जी की जयंती पर उन्हें शत-शत नमन। pic.twitter.com/AFMKwo6QCD
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್: ಇಂದೂ ಕೂಡ ಇಡಿಯಿಂದ ರಾಹುಲ್ ಗಾಂಧಿ ವಿಚಾರಣೆ, ಎಲ್ಲೆಡೆ ಬಿಗಿ ಭದ್ರತೆ