ನಿರುದ್ಯೋಗಿಗಳ ಅಗ್ನಿಪರೀಕ್ಷೆ ಬೇಡ: ಪ್ರಧಾನಿಗೆ ರಾಹುಲ್ ಒತ್ತಾಯ

ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿರುವಂತೆಯೇ, ನಿರುದ್ಯೋಗಿ ಯುವಜನತೆಯ ಧ್ವನಿ ಕೇಳಿ, ಅವರನ್ನು ಅಗ್ನಿಪಥದಲ್ಲಿ ನಡೆಯುವಂತೆ ಮಾಡುವುದರೊಂದಿಗೆ ಅವರ ತಾಳ್ಮೆಯ ಅಗ್ನಿಪರೀಕ್ಷೆ ಮಾಡಬೇಡಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ, ರಾಹುಲ್ ಗಾಂಧಿ
ಪ್ರಧಾನಿ ಮೋದಿ, ರಾಹುಲ್ ಗಾಂಧಿ

ನವದೆಹಲಿ: ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿರುವಂತೆಯೇ, ನಿರುದ್ಯೋಗಿ ಯುವಜನತೆಯ ಧ್ವನಿ ಕೇಳಿ, ಅವರನ್ನು ಅಗ್ನಿಪಥದಲ್ಲಿ ನಡೆಯುವಂತೆ ಮಾಡುವುದರೊಂದಿಗೆ ಅವರ ತಾಳ್ಮೆಯ ಅಗ್ನಿಪರೀಕ್ಷೆ ಮಾಡಬೇಡಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಅಲ್ಪಾವಧಿಯ ಸೇನಾ ನೇಮಕಾತಿಯ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ದೇಶದ ವಿವಿಧೆಡೆ ಗುರುವಾರ ಭಾರೀ ಪ್ರತಿಭಟನೆ ನಡೆದಿದೆ.  ಏಕ ರೂಪ ಪಿಂಚಣಿ ಯೋಜನೆ ಇಲ್ಲ, ಎರಡು ವರ್ಷಗಳಿಗೆ ನೇರ ನೇಮಕಾತಿ ಇಲ್ಲ, ನಾಲ್ಕು ವರ್ಷಗಳ ನಂತರ ಭವಿಷ್ಯದಲ್ಲಿ ಭದ್ರತೆ ಇಲ್ಲ, ಸೇನೆಗಾಗಿ ಸರ್ಕಾರ ಗೌರವ ತೋರಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ದೇಶದ ಯುವ ಜನತೆಯ ಧ್ವನಿ ಕೇಳಿ, ಅವರನ್ನು ಅಗ್ನಿಪಥದಲ್ಲಿ ಸಾಗುವಂತೆ ಮಾಡುವ ಮೂಲಕ ಅವರ ತಾಳ್ಮೆಯ ಅಗ್ನಿಪರೀಕ್ಷೆ ಮಾಡಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com