ಅಗ್ನಿಪಥ್ ಯೋಜನೆ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆ: ರಸ್ತೆ ತಡೆ, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ
ಕೇಂದ್ರ ಸರ್ಕಾರ ಘೋಷಿಸಿರುವ ಅಲ್ವಾವಧಿಯ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರ, ಜಾರ್ಖಂಡ್ ಸೇರಿದಂತೆದೇಶದ ಹಲವೆಡೆ ಪ್ರತಿಭಟನೆ ಭುಗಿಲೆದ್ದಿದೆ.
Published: 16th June 2022 11:43 AM | Last Updated: 16th June 2022 02:56 PM | A+A A-

ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ
ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ ಅಲ್ವಾವಧಿಯ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರ, ಜಾರ್ಖಂಡ್ ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ ಭುಗಿಲೆದ್ದಿದೆ. ಬಿಹಾರದ ಚಾಪ್ರಾದಲ್ಲಿ ಪ್ರತಿಭಟನೆ ನಡೆಸಿದ ಯುವಕರು, ಟೈರ್ ಗೆ ಬೆಂಕಿ ಹಚ್ಚಿಗೆ ಆಕ್ರೋಶ ವ್ಯಕ್ತಪಡಿಸಿದರು. ಬಸ್ ವೊಂದನ್ನು ಧ್ವಂಸಗೊಳಿಸಿದರು.
ಇದನ್ನೂ ಓದಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ 'ಅಗ್ನಿವೀರ'ರಿಗೆ ಆದ್ಯತೆ: ಗೃಹ ಸಚಿವಾಲಯ
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನಾವು ಕಷ್ಟಪಟ್ಟು ಸೇನೆ ಸೇರುತ್ತೇವೆ. ಕೆಲ ತಿಂಗಳು ತರಬೇತಿ ಮತ್ತು ರಜೆಯೊಂದಿಗೆ ಹೇಗೆ ನಾಲ್ಕು ವರ್ಷ ಸೇವೆ ಸಲ್ಲಿಸಲು ಸಾಧ್ಯ? ತರಬೇತಿ ಪಡೆದ ನಂತರ ಕೇವಲ ಮೂರು ವರ್ಷದಲ್ಲಿ ಹೇಗೆ ದೇಶ ರಕ್ಷಿಸಲು ಸಾಧ್ಯ? ಈ ಯೋಜನೆಯನ್ನು ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು.
#WATCH | Bihar: A huge crowd gathers in protest in Nawada, against the recently announced #AgnipathRecruitmentScheme for armed forces. pic.twitter.com/Sjr40Hr0M5
— ANI (@ANI) June 16, 2022
ನಾಲ್ಕು ವರ್ಷ ಕಳೆದ ನಂತರ ಕೆಲಸಕ್ಕಾಗಿ ನಾವು ಎಲ್ಲಿಗೆ ಹೋಗಬೇಕು ಎಂದು ಮತ್ತೋರ್ವ ಪ್ರತಿಭಟನಾಕಾರರು ಕೇಳಿದರು. ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ನಾವು ಮನೆಗೆ ಹೋಗಬೇಕಾ? ಆದ್ದರಿಂದ ನಾವು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
Jharkhand | Prohibitions under Sec 144 CrPC continue to remain imposed in areas that were affected due to the violence in Ranchi on 10th June. Visuals from Main Road in Ranchi earlier this morning. pic.twitter.com/xHPN8bxL7i
— ANI (@ANI) June 16, 2022
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ಜೂನ್ 10 ರಂದು ಹಿಂಸಾಚಾರದ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ.